ಸೋಮವಾರ, ಆಗಸ್ಟ್ 15, 2022
27 °C

ರಾಜ್ಯ ರ‍್ಯಾಂಕಿಂಗ್ ಟಿಟಿ: ಸಮರ್ಥ್, ಯಶಸ್ವಿನಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದ ಸಮರ್ಥ್ ಕುರಡಿಕೇರಿ ಮತ್ತು ಎಸ್‌ಕೆಯಿಎಸ್‌ನ ಯಶಸ್ವಿನಿ ಘೋರ್ಪಡೆ ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಪ್ರಶಸ್ತಿ ಜಯಿಸಿದರು.

ಗುರುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಸಮರ್ಥ್ 11-9, 7-11,11-9, 11-5, 11-7ರಿಂದ ಪಿ.ವಿ. ಶ್ರೀಕಾಂತ್ ಕಶ್ಯಪ್ ವಿರುದ್ಧ ಜಯಿಸಿದರು. ನಾಲ್ಕರ ಘಟ್ಟದಲ್ಲಿ ಸಮರ್ಥ್ 11–8, 1–11, 12–10, 11–5, 11–5ರಿಂದ ವರುಣ್ ಕಶ್ಯಪ್ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಶ್ರೀಕಾಂತ್ 11-6, 8-11, 11-7, 10-12, 11-9, 3-11, 11-9ರಿಂದ ಎಟಿಟಿಸಿಯ ರಕ್ಷಿತ್ ಬಾರಿಗಿಡದ ವಿರುದ್ಧ ಜಯಿಸಿದರು. 

ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಯಶಸ್ವಿನಿ ಘೋರ್ಪಡೆ 8-11, 11-5, 11-8, 11-7, 11-8ರಿಂದ ಎ. ಸಂಯುಕ್ತಾ ವಿರುದ್ಧ ಗೆದ್ದರು. ಸೆಮಿಫೈನಲ್‌ನಲ್ಲಿ ಯಶಸ್ವಿನಿ 16–14, 13–11, 11–4, 8–11, 11–8ರಿಂದ ಅನರ್ಘ್ಯಾ ಮಂಜುನಾಥ್ ವಿರುದ್ಧ; ಇನ್ನೊಂದು ಪಂದ್ಯದಲ್ಲಿ ಸಂಯುಕ್ತಾ 14–12, 11–9, 11–7, 11–9ರಿಂದ ಡಬ್ಲ್ಯುಸಿಟಿಟಿಸಿಯ ಖುಷಿ ಅವರನ್ನು ಮಣಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು