ಪಾಕಿಸ್ತಾನಕ್ಕೆ ಅಫ್ಗಾನಿಸ್ತಾನದ ಸವಾಲು

ಬುಧವಾರ, ಜೂನ್ 19, 2019
23 °C
ಇಂದಿನಿಂದ ವಿಶ್ವಕಪ್‌ ಅಭ್ಯಾಸ ಪಂದ್ಯಗಳು

ಪಾಕಿಸ್ತಾನಕ್ಕೆ ಅಫ್ಗಾನಿಸ್ತಾನದ ಸವಾಲು

Published:
Updated:
Prajavani

ಬ್ರಿಸ್ಟಲ್‌: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ತಂಡಗಳು ಈ ಸಲದ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ ಎದುರಾಗಲಿವೆ.

ಕೌಂಟಿ ಮೈದಾನದಲ್ಲಿ ನಿಗದಿಯಾಗಿರುವ ಈ ಹಣಾಹಣಿಯಲ್ಲಿ ಸರ್ಫರಾಜ್‌ ಅಹ್ಮದ್‌ ಸಾರಥ್ಯದ ಪಾಕ್‌ ತಂಡವು  ಸುಲಭವಾಗಿ ಗೆದ್ದು ವಿಶ್ವಾಸ ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದೆ.

ಸರ್ಫರಾಜ್‌ ಬಳಗವು ಎರಡು ವರ್ಷಗಳ ಹಿಂದೆ (2017) ಇಂಗ್ಲೆಂಡ್‌ನಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು. ಇದು ಆಟಗಾರರ ಮನೋಬಲ ಹೆಚ್ಚುವಂತೆ ಮಾಡಿದೆ.

ಆಸಿಫ್‌ ಅಲಿ, ಬಾಬರ್‌ ಅಜಂ, ಫಖಾರ್‌ ಜಮಾನ್‌ ಮತ್ತು ಹ್ಯಾರಿಸ್‌ ಸೋಹೈಲ್‌ ಅವರು ಬ್ಯಾಟಿಂಗ್‌ನಲ್ಲಿ ತಂಡದ ಶಕ್ತಿಯಾಗಿದ್ದಾರೆ.

ಆಲ್‌ರೌಂಡರ್‌ಗಳಾದ ಮೊಹಮ್ಮದ್‌ ಹಫೀಜ್‌, ಇಮಾದ್‌ ವಾಸೀಂ, ಶಾದಬ್‌ ಖಾನ್‌ ಮತ್ತು ಶೋಯಬ್‌ ಮಲಿಕ್‌ ಅವರ ಬಲವೂ ಈ ತಂಡಕ್ಕಿದೆ. ನಾಯಕ ಸರ್ಫರಾಜ್‌ ಕೂಡಾ ಸ್ಫೋಟಕ ಬ್ಯಾಟಿಂಗ್‌ ಮಾಡಿ ಪಂದ್ಯದ ಚಿತ್ರಣ ಬದಲಿಸಬಲ್ಲರು.

ವಹಾಬ್‌ ರಿಯಾಜ್‌, ಮೊಹಮ್ಮದ್‌ ಅಮೀರ್‌ ಮತ್ತು ಹಸನ್‌ ಅಲಿ ಅವರು ತಮ್ಮ ಬತ್ತಳಿಕೆಯಲ್ಲಿರುವ ವೇಗದ ಅಸ್ತ್ರಗಳನ್ನು ಪ್ರಯೋಗಿಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಲು ಕಾತರರಾಗಿದ್ದಾರೆ. ಶಾಹೀನ್‌ ಶಾ ಅಫ್ರಿದಿ ಮೇಲೂ ಭರವಸೆ ಇಡಬಹುದು.

ಗುಲ್ಬದೀನ್‌ ನೈಬ್‌ ನೇತೃತ್ವದ ಅಫ್ಗಾನ್‌ ಕೂಡಾ ಗೆಲುವಿನ ಕನಸು ಕಾಣುತ್ತಿದೆ. ಅಸ್ಗರ್‌ ಅಫ್ಗಾನ್‌, ಹಸಮತ್‌ಉಲ್ಲಾ ಶಾಹಿದಿ, ಹಜರತ್‌ಉಲ್ಲಾ ಜಜಾಯ್‌ ಅವರು ಮಿಂಚುವ ವಿಶ್ವಾಸ ಹೊಂದಿದ್ದಾರೆ.

ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ರಶೀದ್‌ ಖಾನ್‌, ಮೊಹಮ್ಮದ್‌ ನಬಿ ಮತ್ತು ಮುಜೀಬ್‌ ಉರ್‌ ರಹಮಾನ್‌ ಕೂಡಾ ಆಕರ್ಷಣೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾ–ಶ್ರೀಲಂಕಾ ಮುಖಾಮುಖಿ: ಕಾರ್ಡಿಫ್‌ನಲ್ಲಿ ನಿಗದಿಯಾಗಿರುವ ಇನ್ನೊಂದು ಹೋರಾಟದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ.

ಫಾಫ್‌ ಡು ಪ್ಲೆಸಿ ಮುಂದಾಳತ್ವದ ದಕ್ಷಿಣ ಆಫ್ರಿಕಾ ತಂಡವು ಈ ಸಲ ಪ್ರಶಸ್ತಿ ಗೆದ್ದು ‘ಚೋಕರ್ಸ್‌’ ಹಣೆಪಟ್ಟಿ ಕಳಚುವ ವಿಶ್ವಾಸದಲ್ಲಿದೆ. ಈ ಹಾದಿಯಲ್ಲಿ ‘ಲಂಕಾ ದಹನ’ ನಡೆಸಲು ಸಜ್ಜಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !