ನವದೆಹಲಿ (ಪಿಟಿಐ): ಈ ಸಲವೂ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನು ಗಿಟ್ಟಿಸುವಲ್ಲಿ ಭಾರತ ವಿಫಲವಾಗಿದೆ. ಆದರೆ ಅಮೆರಿಕದಲ್ಲಿ ನಡಯಲಿರುವ 23ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೂಲದ ನಾಲ್ವರು ಆಟಗಾರರು ಕಣಕ್ಕಿಳಿಯಲಿದ್ದಾರೆ.

ಸರಪ್ರೀತ್ ಸಿಂಗ್, ಸ್ಯಾಮ್ಯುವೆಲ್ ಮುತ್ತುಸ್ವಾಮಿ, ನಿಶಾನ್ ವೇಲುಪಿಳ್ಳೈ ಮತ್ತು ತಹಸೀನ್ ಮೊಹಮ್ಮದ್ ಅವರು ಈ ಬಾರಿ ಆಡಲಿದ್ದಾರೆ. 2006ರ ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಮೂಲದ ವಿಕಾಶ್ ದೊರಾಸೂ ಅವರು ಫ್ರಾನ್ಸ್ ತಂಡದಲ್ಲಿ ಮಿಡ್ಫೀಲ್ಡರ್ ಆಗಿದ್ದರು. ಆಂಧ್ರಪ್ರದೇಶದ ವಿಜಯನಗರಂ ಮೂಲದ ವಿಕಾಶ್ ಅವರ ಅಜ್ಜನ ಕುಟುಂಬವು ಫ್ರಾನ್ಸ್ಗೆ ತೆರಳಿ ಅಲ್ಲಿಯೇ ನೆಲಸಿತ್ತು.

ಈ ಸಲ ಕಣಕ್ಕಿಳಿಯಲಿರುವ ನಾಲ್ವರು ಆಟಗಾರರು ಬೇರೆ ಬೇರೆ ದೇಶಗಳ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.

ಪಂಜಾಬ್ ಮೂಲದ ಸರಪ್ರೀತ್ ಸಿಂಗ್ ಅವರು ನ್ಯೂಜಿಲೆಂಡ್ ತಂಡದಲ್ಲಿದ್ದಾರೆ. ಅವರು ಆಕ್ಲೆಂಡ್ನಲ್ಲಿ ಜನಿಸಿದ್ದಾರೆ. 2018ರಲ್ಲಿ ಮುಂಬೈನಲ್ಲಿ ನಡೆದಿದ್ದ ಇಂಟರ್ಕಾಂಟಿನೆಂಟರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿಯೂ ಆಡಿದ್ದರು. ಕಿವೀಸ್ ತಂಡವು 2–1ರಿಂದ ಭಾರತ ಎದುರು ಜಯಿಸುವಲ್ಲಿ ಸರಪ್ರೀತ್ ಅವರ ಕಾಣಿಕೆಯೂ ಇತ್ತು. ಅವರು ಎರಡೂ ಗೋಲು ಗಳಿಕೆಯಲ್ಲಿ ಅಸಿಸ್ಟ್ ಮಾಡಿದ್ದರು. ಅಲ್ಲದೇ ಕೆನ್ಯಾ ಎದುರಿನ ಪಂದ್ಯದಲ್ಲಿಯೂ ಗೋಲು ಗಳಿಸಿದ್ದರು.

2019ರಲ್ಲಿ ಬಾಯನ್ ಮ್ಯೂನಿಕ್ ತಂಡವನ್ನು ಪ್ರತಿನಿಧಿಸಿದ್ದರು. ಆ ಮೂಲಕ ಜರ್ಮನಿಯ ಮೊದಲ ಡಿವಿಷನ್ ಲೀಗ್ನಲ್ಲಿ ಆಡಿದ ಮೊದಲ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಸ್ಟ್ರೇಲಿಯಾದ ಎ ಲೀಗ್ ಕ್ಲಬ್ ವೆಲ್ಲಿಂಗ್ಟನ್ ಫಿನಿಕ್ಸ್ ನಲ್ಲಿಯೂ ಆಡಿದರು. ಆಕ್ರಮಣಶೀಲ ಮಿಡ್ಫಿಲ್ಡರ್ ಆಗಿ ಗಮನ ಸೆಳೆದರು. ಮ್ಯಾನೇಜರ್ ಹ್ಯಾನ್ಸಿ ಫ್ಲಿಕ್ ಅವರ ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಅವರು ಬಾಯನ್ ಮ್ಯೂನಿಕ್ ಸೀನಿಯರ್ ತಂಡಕ್ಕೆ 2020ರಲ್ಲಿ ಪದಾರ್ಪಣೆ ಮಾಡಿದರು. ಪೋರ್ಚುಗಲ್ನಲ್ಲಿಯೂ ನಿಯೊ ಡಿ ಲೀರಿಯಾ ಕ್ಲಬ್ನಲ್ಲಿಯೂ ಒಂದು ಋತುವಿನಲ್ಲಿ ಆಡಿದ್ದರು. ಅಲ್ಲಿಂದ ಸರ್ಬಿಯನ್ ಸೂಪರ್ ಲೀಗ್ ಆದ ಎಫ್ಕೆ ಟಿಎಸ್ಸಿ 2025 ಗೆ ತೆರಳಿದರು.

ಹೋದ ಫೆಬ್ರುವರಿಯಲ್ಲಿ ಅವರು ಗಾಯಗೊಂಡಿದ್ದರು. ಎಂಟು ವಾರಗಳ ವಿಶ್ರಾಂತಿಯ ನಂತರ ಏಪ್ರಿಲ್ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮರಳಿದರು. ಅವರು ಕಿವೀಸ್ ಬಳಗದಲ್ಲಿ ಒಟ್ಟು 24 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. 2017 ಹಾಗೂ 2019ರಲ್ಲಿ 20 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿಯೂ ಸ್ಯಾಮುವೆಲ್ ಮುತ್ತುಸಾಮಿ ಅವರು ಕಾಂಗೊ ದೇಶವನ್ನು ಪ್ರತಿನಿಧಿಸಲಿದ್ದಾರೆ. ಅವರು ಫ್ರಾನ್ಸ್ನಲ್ಲಿ ಜನಿಸಿದ್ದರು. ತಂದೆ ತಮಿಳುನಾಡಿನವರು ಹಾಗೂ ತಾಯಿ ಕಾಂಗೋ ದೇಶದವರು. 19ನೇ ಶತಮಾನದಲ್ಲಿ ದಕ್ಷಿಣ ಭಾರತದಿಂದ ಫ್ರಾನ್ಸ್ಗೆ ವಲಸೆ ಹೋದವರಲ್ಲಿ ಸ್ಯಾಮುವೆಲ್ ಕುಟುಂಬದ ಪೂರ್ವಜರಿದ್ದರೆನ್ನಲಾಗಿದೆ.

ಫಿಫಾ ನಿಯಮದ ಪ್ರಕಾರ ತಾಯಿ ಅಥವಾ ತಂದೆಯ ತವರು ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ನೀಡಲಾಗುತ್ತದೆ. ಆದ್ದರಿಂದ ಸ್ಯಾಮುವೆಲ್ ಅವರು ತಾಯಿಯ ತವರು ಕಾಂಗೊ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

29 ವರ್ಷದ ಮಿಡ್ಫೀಲ್ಡರ್ ಪ್ರಸ್ತುತ ಗ್ರೀಕ್ ಸೂಪರ್ ಲೀಗ್ ಕ್ಲಬ್ನಲ್ಲಿ ಆಡುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಫ್ರಾನ್ಸ್ನ ಎಫ್ಸಿ ನಾಂತೆಸ್ ಮತ್ತು ಟರ್ಕಿಯ ಓಜಬೆಲೆಸನ್ ಸಿವಾಸ್ಪೊರ್ ತಂಡದಲ್ಲಿ ಆಡಿದ್ದಾರೆ.

ಆಸ್ಟ್ರೇಲಿಯಾ ತಂಡದಲ್ಲಿರುವ ನಿಶಾನ್ ವೇಲುಪಿಳ್ಳೈ ಅವರಿಗೆ ಈಗ 25 ವರ್ಷ. ಮೆಲ್ಬರ್ನ್ನಲ್ಲಿ ಜನಿಸಿದ್ದಾರೆ. ಆಂಗ್ಲೊ–ಇಂಡಿಯನ್ ತಾಯಿ ಮತ್ತು ತಂದೆಯು ಶ್ರೀಲಂಕಾ ತಮಿಳು ಮೂಲದವರಾಗಿದ್ದು ಮಲೇಷ್ಯಾ ಪ್ರಜೆಯಾಗಿದ್ದಾರೆ. ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಆಸ್ಟ್ರೇಲಿಯಾ ತಂಡದಲ್ಲಿ ವಿಂಗರ್ ಆಗಿದ್ದಾರೆ. ಆಸ್ಟ್ರೇಲಿಯಾದ ಎ ಲೀಗ್ನಲ್ಲಿ ಅವರು ಮೆಲ್ಬರ್ನ್ ವಿಕ್ಟರಿ ತಂಡದಲ್ಲಿ ಆಡಿದ್ದರು. 2024ರಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಪದಾರ್ಪಣೆ ಮಾಡಿದ್ದರು.

ಕತಾರ್ ತಂಡದಲ್ಲಿರುವ ತಹಸೀನ್ ಮೊಹಮ್ಮದ್ ಜಮಶೇದ್ ಅವರು ಕೇರಳದ ಕಣ್ಣೂರಿನವರು. ಮಲೆಯಾಳಿ ದಂಪತಿಯು 2006ರಲ್ಲಿ ದೋಹಾಗೆ ತೆರಳಿದ್ದರು. ತಹಸೀನ್ ಅವರಿಗೆ ಈಗ 20 ವರ್ಷ ವಯಸ್ಸು. ಅವರ ತಂದೆ ಜಮಶೇದ್ ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಫುಟ್ಬಾಲ್ ಆಟಗಾರರಾಗಿದ್ದರು. ಸದ್ಯ ಕತಾರ್ನಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಮಶೇದ್ ಅವರು ತಲಸ್ಸೇರಿಯವರು ಹಾಗೂ ತಾಯಿ ಶೀಮಾ ಅವರು ವೇಲಪಟ್ಟಣಂನವರು.

ತಂದೆಯ ಮಾರ್ಗದರ್ಶನದಲ್ಲಿ ತಹಸೀನ್ ಫುಟ್ಬಾಲ್ ಕಲಿತರು. ನಂತರ ದೋಹಾದ ಆಸ್ಪೈರ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದಾರೆ. ಕತಾರ್ ಸ್ಟಾರ್ಸ್ ಲೀಗ್ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆ ಅವರದ್ದು. ಸದ್ಯ ಅವರು ಅಲ್ ಸುಹೇಲ್ ಸ್ಪೋರ್ಟ್ಸ್ ಕ್ಲಬ್ ತಂಡದಲ್ಲಿ ಆಡುತ್ತಾರೆ.

ವಿಂಗರ್ ಆಗಿರುವ ತಹಸೀನ್ 2024ರಲ್ಲಿ ಏಷ್ಯನ್ ಕ್ವಾಲಿಫಯರ್ ಗ್ರುಪ್ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರಿನ ಪಂದ್ಯದಲ್ಲಿ ಕತಾರ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-18-1959331834

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.