ಅಂಟಾಲ್ಯ (ಎಎಫ್ಪಿ): ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಪೂರ್ವಭಾವಿಯಾಗಿ ತರಬೇತಿ ಶಿಬಿರದಲ್ಲಿ ಭಾಗಿಯಾಗಲು ಮತ್ತು ವೀಸಾ ಅರ್ಜಿ ಪ್ರಕ್ರಿಯೆ ಪೂರೈಸಲು ಇರಾನ್ ಫುಟ್ಬಾಲ್ ತಂಡ ಸೋಮವಾರ ಇಲ್ಲಿಗೆ ಬಂದಿಳಿಯಿತು. ತಂಡವು 22 ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯನ್ನು ಒಳಗೊಂಡಿದೆ.

ನೇವಿ ಬ್ಲೂ ಟ್ರ್ಯಾಕ್ಸೂಟ್ನಲ್ಲಿ ಕಾಣಿಸಿಕೊಂಡ ಇರಾನ್ ಆಟಗಾರರು ವಿಮಾನ ನಿಲ್ದಾಣದಿಂದ ನೇರವಾಗಿ ಅಂಟಾಲ್ಯದ ರೆಸಾರ್ಟ್ಗೆ ತೆರಳಿದರು. ತಂಡವು ಕೆಲವು ವಾರಗಳ ತರಬೇತಿಯ ನಂತರ ಅಮೆರಿಕಕ್ಕೆ ತೆರಳಲಿದೆ. ಅಮೆರಿಕ ವಿಶ್ವಕಪ್ನ ಜಂಟಿ ಆತಿಥ್ಯ ವಹಿಸಿದೆ.

ಅರಿಝೋನಾದ ಟಸ್ಕಾನ್ ನಗರವು ಇರಾನ್ ತಂಡಕ್ಕೆ ನೆಲೆಯಾಗಿದೆ. ತಂಡವು ಗುಂಪು ಹಂತದಲ್ಲಿ ಮೂರು ಪಂದ್ಯಗಳನ್ನು ಆಡಬೇಕಾಗಿದೆ.

ಇರಾನ್ ತಂಡವು ಅಂಟಾಲ್ಯದಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡುವ ವಿಶ್ವಾಸ ಹೊಂದಿದೆ. ಒಂದು ಪಂದ್ಯವು ಗ್ಯಾಂಬಿಯಾ ವಿರುದ್ಧ ಮೇ 29ರಂದು ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-339864231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.