ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ 2023 | ದಾಖಲೆಯ 12.5 ಲಕ್ಷ ಅಭಿಮಾನಿಗಳಿಂದ ನೇರ ವೀಕ್ಷಣೆ: ಐಸಿಸಿ

Published 21 ನವೆಂಬರ್ 2023, 10:27 IST
Last Updated 21 ನವೆಂಬರ್ 2023, 10:27 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ 10 ಸ್ಥಳಗಳಲ್ಲಿ ಈ ಬಾರಿಯ ಕ್ರಿಕೆಟ್‌ ವಿಶ್ವಕಪ್ ಪಂದ್ಯಗಳು ನಡೆದಿದ್ದು, ಒಟ್ಟು 12.5 ಲಕ್ಷ  (1.25 ಮಿಲಿಯನ್‌) ಅಭಿಮಾನಿಗಳು ನೇರವಾಗಿ ಪಂದ್ಯ ವೀಕ್ಷಣೆಗೆ ಹಾಜರಾಗಿದ್ದರು ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮಂಗಳವಾರ ಹೇಳಿದೆ.

ಈ ಮೂಲಕ ಅತಿ ಹೆಚ್ಚು ಮಂದಿ ನೇರವಾಗಿ ವೀಕ್ಷಿಸಿದ ಕ್ರಿಕೆಟ್‌ ವಿಶ್ವಕಪ್‌ ಪಂದ್ಯ ಎನ್ನುವ ಹೆಗ್ಗಳಿಕೆಗೆ 2023ರ ಟೂರ್ನಿ ಪಾತ್ರವಾಗಿದೆ. ಈ ಹಿಂದೆ 2015ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಒಟ್ಟು 10.16 ಲಕ್ಷ (1.016 ಮಿಲಿಯನ್‌) ಮಂದಿ ಪಾಲ್ಗೊಂಡಿದ್ದರು. 2015ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಮುಖಾಮುಖಿಯಾಗಿತ್ತು, ಆಸ್ಟ್ರೇಲಿಯಾ 7 ವಿಕೆಟ್‌ಗಳ ಜಯ ಸಾಧಿಸಿತ್ತು.

13ನೇ ಆವೃತ್ತಿಯ ವಿಶ್ವಕಪ್‌ ಪಂದ್ಯವು ಅಕ್ಟೋಬರ್‌ 5 ರಿಂದ ಆರಂಭವಾಗಿ ನವೆಂಬರ್ 19 ರಂದು ಕೊನೆಗೊಂಡಿದೆ. ಈ ಬಾರಿ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ 6 ನೇ ಬಾರಿಗೆ ಜಯ ಸಾಧಿಸಿದೆ.

ಒಟ್ಟಾರೆಯಾಗಿ ಈ ಬಾರಿಯ ಏಕದಿನ ವಿಶ್ವಕ‍ಪ್‌ ಪಂದ್ಯ ಅತ್ಯಂತ ಯಶಸ್ಸು ಕಂಡಿದೆ ಎಂದು ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.

ನೇರ ವೀಕ್ಷಣೆ ಮಾತ್ರವಲ್ಲದೆ ವಿಶ್ವಕಪ್‌ 2023 ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲೂ ದಾಖಲೆ ನಿರ್ಮಿಸಿದೆ.  ವಿಶ್ವಕಪ್‌ ಟೂರ್ನಿ ಮನರಂಜನೆಯನ್ನು ಮಾತ್ರವಲ್ಲದೆ ಕ್ರೀಡೆಯ ಸಂಭ್ರಮದಲ್ಲಿ ಜಾಗತಿಕವಾಗಿ ಕ್ರಿಕೆಟ್ ಅಭಿಮಾನಿಗಳನ್ನು ಒಂದುಗೂಡಿಸಿದೆ ಎಂದು ಕ್ರಿಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT