ನವದೆಹಲಿ: ಇಂಗ್ಲೆಂಡ್ನ ರಿಚರ್ಡ್ ಇಲಿಂಗ್ವರ್ತ್ ಮತ್ತು ಅಲೆಕ್ಸ್ ವಾರ್ಫ್ ಅವರು ಭಾನುವಾರ ಅಹಮದಾಬಾದಿನಲ್ಲಿ ನಡೆಯಲಿರುವ ಭಾರತ– ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೆ ಅಂಪೈರ್ಗಳಾಗಿದ್ದಾರೆ.

ಇಲಿಂಗ್ವರ್ತ್ ಅವರು 2024ರ ಆವೃತ್ತಿಯ ಫೈನಲ್ನಲ್ಲೂ ಫೀಲ್ಡ್ ಅಂಪೈರ್ ಆಗಿದ್ದರು. ಆಗ ಅವರೊಂದಿಗೆ ಕ್ರಿಸ್ ಗಫಾನಿ ಜೊತೆಗಿದ್ದರು. ಇಲಿಂಗ್ವರ್ತ್ 2023ರ ವಿಶ್ವಕಪ್ ಫೈನಲ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲೂ ಅವರು ಕಾರ್ಯನಿರ್ವಹಿಸಿದ್ದರು.

ವಾರ್ಫ್ ಮೊದಲ ಬಾರಿ ಸೀನಿಯರ್ ಫೈನಲ್ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2025ರಲ್ಲಿ ಎಮಿರೇಟ್ಸ್ ಎಲೈಟ್ ಅಂಪೈರ್ಸ್ ಪ್ಯಾನೆಲ್ಗೆ ಸೇರ್ಡಪೆಗೊಂಡಿದ್ದರು.

ನ್ಯೂಜಿಲೆಂಡ್– ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪಂದ್ಯದಲ್ಲೂ ಇಲಿಂಗ್ವರ್ತ್– ವಾರ್ಫ್ ಅಂಪೈರ್ಗಳಾಗಿದ್ದರು. ಅವರ ಜೊತೆ ಅಲ್ಲಾಹುದ್ದೀನ್ ಪಾಲೇಕರ್ ಮೂರನೇ ಮತ್ತು ಅಡ್ರಿಯಾನ್ ಹೋಲ್ಸ್ಟಾಕ್ ನಾಲ್ಕನೇ ಅಂಪೈರ್ ಆಗಿದ್ದಾರೆ. ಜಿಂಬಾಬ್ವೆಯ ಆ್ಯಂಡಿ ಪೈಕ್ರಾಫ್ಟ್ ಮ್ಯಾಚ್ ರೆಫ್ರಿ ಆಗಿ ಕಾರ್ಯನಿರ್ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.