ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಈಗ ರೋಚಕ ಘಟ್ಟಕ್ಕೆ ತಲುಪಿದೆ. ಭಾರತಕ್ಕೆ ಸತತ ಎರಡನೇ ಪ್ರಶಸ್ತಿಯ ಜಯ ಮತ್ತು ತವರಿನಂಗಳದಲ್ಲಿ ಚಾಂಪಿಯನ್ ಆಗುವ ಮೊದಲ ತಂಡವೆಂಬ ದಾಖಲೆಗಳನ್ನು ಮಾಡಲು ಇನ್ನೆರಡು ಮೆಟ್ಟಿಲುಗಳಷ್ಟೇ ಬಾಕಿ ಇವೆ. ಅದರ ಮೊದಲ ಮೆಟ್ಟಿಲು ಇಂಗ್ಲೆಂಡ್ ಎದುರಿನ ಸೆಮಿಫೈನಲ್ ಪಂದ್ಯ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶಿಸಲಿದ್ದಾರೆ. ಭಾರತದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಅವರು ಆರಂಭಿಕ ಹಂತದಲ್ಲಿ ಉತ್ತಮ ಅಡಿಪಾಯ ಹಾಕುವರೇ? ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಅದರ ಮೇಲೆ ರನ್ ಗೋಪುರ ಕಟ್ಟುವರೇ? ಜಸ್ಪ್ರೀತ್ ಬೂಮ್ರಾ ನೇತೃತ್ವದ ಬೌಲಿಂಗ್ ಪಡೆ ಇಂಗ್ಲೆಂಡ್ ಬ್ಯಾಟರ್ಗಳಿಗೆ ಕಡಿವಾಣ ಹಾಕುವರೇ? ಎಂಬೆಲ್ಲ ಪ್ರಶ್ನೆಗಳ ಕುರಿತು ‘ಪ್ರಜಾವಾಣಿ’ ಸಂವಾದದಲ್ಲಿ ಉತ್ತರಗಳಿವೆ. ವೀಕ್ಷಕ ವಿವರಣೆಗಾರ ಚಂದ್ರಮೌಳಿ ಕಣವಿ, ಬಿಸಿಸಿಐ ಅಂಪೈರ್ ಅಭಿಜಿತ್ ಬೆಂಗೇರಿ ಹಾಗೂ ಗಿರೀಶ ದೊಡ್ಡಮನಿ ಸಂವಾದ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.