ನ್ಯೂಯಾರ್ಕ್ (ಎಎಫ್ಪಿ): ಫುಟ್ಬಾಲ್ ದಂತಕತೆ ಪೆಲೆ ಅವರು 1958ರ ವಿಶ್ವಕಪ್ ಗೆಲುವಿನ ವೇಳೆ ಧರಿಸಿದ್ದ ಜರ್ಸಿಯನ್ನು (ಪೋಷಾಕು) ಹರಾಜು ಹಾಕಲಾಗುವುದು ಎಂದು ಹರಾಜು ಸಂಸ್ಥೆ ಸೊದೆಬಿ ಮಂಗಳವಾರ ಪ್ರಕಟಿಸಿದೆ. ವಿಶ್ವಕಪ್ ಫುಟ್ಬಾಲ್ ಸಂದರ್ಭದಲ್ಲೇ ಈ ಹರಾಜು ನಡೆಯುತ್ತಿರುವುದು ವಿಶೇಷ.

ಆತಿಥೇಯ ಸ್ವೀಡನ್ ವಿರುದ್ಧ ಫೈನಲ್ ಪಂದ್ಯದಲ್ಲಿ ಪೆಲೆ ಅವರು ಬ್ರೆಜಿಲ್ನ ಐದು ಗೋಲುಗಳ ಪೈಕಿ ಎರಡನ್ನು ಹೊಡೆದಿದ್ದರು. ಆಗ ಅವರಿಗೆ ಕೇವಲ 17 ವರ್ಷ ವಯಸ್ಸು. ಬ್ರೆಜಿಲ್ ಗೆದ್ದ ಐದು ವಿಶ್ವಕಪ್ ಪ್ರಶಸ್ತಿಗಳಲ್ಲಿ ಅದು ಮೊದಲನೆಯದ್ದಾಗಿತ್ತು. ಇದರಲ್ಲಿ ಮೂರು ಸಂದರ್ಭದಲ್ಲಿ ಪೆಲೆ ಆಡಿದ್ದರು.

ಅವರು ಮೂಲ ಹೆಸರು ಎಡ್ಸನ್ ಅರಂಟೆಸ್ ಡೊ ನಾಸಿಮೆಂಟೊ. ಕರುಳಿನ ಕ್ಯಾನ್ಸರ್ನಿಂದ 2022ರ ಡಿಸೆಂಬರ್ನಲ್ಲಿ ನಿಧನರಾದಾಗ ಅವರ ವಯಸ್ಸು 82.

‘ನಂ 10 ಜರ್ಸಿ’ ₹5.70 ಕೋಟಿಗೆ (60 ಲಕ್ಷ ಡಾಲರ್) ಮಾರಾಟ ವಾಗಬಹುದೆಂದು ಅಂದಾಜಿಸಲಾಗಿದೆ ಎಂದು ಸೊದೆಬಿ ಹೇಳಿಕೆಯಲ್ಲಿ ತಿಳಿಸಿದೆ. ಜೂನ್ 29 ರಿಂದ ಜುಲೈ 16ರ ಅವಧಿಯಲ್ಲಿ ಹರಾಜು ನಡೆಯಲಿದೆ. ಜುಲೈ 19ರಂದು ಈ ಬಾರಿಯ ವಿಶ್ವಕಪ್ ಟೂರ್ನಿಯ ಫೈನಲ್ ನಿಗದಿಯಾಗಿದೆ.

ಡೀಗೊ ಮರಡೊನಾ ಅವರು ಪ್ರಸಿದ್ಧ ‘ಹ್ಯಾಂಡ್ ಆಫ್ ಗಾಡ್’ ಗೋಲು ಹೊಡೆದಾಗ ಧರಿಸಿದ್ದ ಜರ್ಸಿ 2022ರಲ್ಲಿ ಹರಾಜಿಗೆ ಬಂದಾಗ ₹88 ಕೋಟಿಗೆ ಮಾರಾಟವಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-252399074

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.