ಸತತ ಎರಡನೇ ಫೈನಲ್
2024 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಭಾರತ, ಮತ್ತೊಮ್ಮೆ ಫೈನಲ್‌ಗೇರಿದ ಸಾಧನೆ ಮಾಡಿದೆ. ಇದರೊಂದಿಗೆ, ಸತತ ಎರಡು ಸಲ ಚಾಂಪಿಯನ್ ಪಟ್ಟಕ್ಕೇರಿದ ತಂಡ ಎನಿಸಿಕೊಳ್ಳುವ ಅವಕಾಶವನ್ನೂ ಗಿಟ್ಟಿಸಿಕೊಂಡಿದೆ. ಭಾರತ ಹೊರತುಪಡಿಸಿ, ಪಾಕಿಸ್ತಾನ (2007, 2009) ಹಾಗೂ ಶ್ರೀಲಂಕಾ (2012, 2014) ಮಾತ್ರವೇ ಸತತ ಎರಡು ಸಲ ಫೈನಲ್ ತಲುಪಿದ ಸಾಧನೆ ಮಾಡಿವೆ.