ಅಹಮದಾಬಾದ್: ಮುಂಬೈನಲ್ಲಿ ಟಿ20 ವಿಶ್ವಕಪ್ ಸೆಮಿಫೈನಲ್ಗೆ ಎರಡು ದಿನಗಳ ಮುನ್ನ ಚಂದ್ರಗ್ರಹಣ ಇದ್ದ ಕಾರಣ ಭಾರತ ಕ್ರಿಕೆಟ್ ತಂಡವು ನಿಗದಿಯ ವೇಳೆಗಿಂತ ಸುಮಾರು 45 ನಿಮಿಷ ತಡವಾಗಿ ಅಭ್ಯಾಸಕ್ಕೆ ತೆರಳಿತ್ತು.

ಇದೀಗ ಫೈನಲ್ ಪಂದ್ಯವಾಡಲು ಅಹಮದಾಬಾದಿಗೆ ಬಂದಿರುವ ತಂಡವು ಪ್ರತಿ ಬಾರಿ ತಂಗುವ ಹೋಟೆಲ್ ಬದಲಿಸಿದೆ. ಏಕೆಂದರೆ ಈ ಹಿಂದೆ ಎರಡು ಬಾರಿ (2023ರ ಏಕದಿನ ವಿಶ್ವಕಪ್ ಫೈನಲ್ ಮತ್ತು ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 8ರ ಹಂತದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯ) ಆ ಹೋಟೆಲ್ನಲ್ಲಿ ತಂಗಿದ್ದಾಗ ಆಡಿದ್ದ ಮಹತ್ವದ ಪಂದ್ಯಗಳಲ್ಲಿ ಸೋತಿತ್ತು. ಆದ್ದರಿಂದ ಈ ಬಾರಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡುವ ಮುನ್ನ ಅದೃಷ್ಟದೇವತೆಯನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ತಂಡವು ಮಾಡಿದೆ

ತಂಡದಲ್ಲಿರುವ ಪ್ರಮುಖ ನೆರವು ಸಿಬ್ಬಂದಿಯೊಬ್ಬರು ಅಪಾರ ದೈವಭಕ್ತರಾಗಿದ್ದಾರೆ. ತಂಡಕ್ಕೆ ಇಂತಹ ಸಲಹೆಗಳನ್ನು ನೀಡುತ್ತಾರೆಂದು ಹೇಳಲಾಗಿದೆ. ತಂಡಕ್ಕೆ ಬೇಕಾದ ಅನುಕೂಲಗಳನ್ನು ಮಾಡಿಕೊಡುವಲ್ಲಿ ಬಿಸಿಸಿಐ ಕೂಡ ಪೂರ್ಣ ಸಹಕಾರ ನೀಡಿದೆ.

ಕೆಂಪುಮಣ್ಣಿನ ಪಿಚ್?

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈಚೆಗೆ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಪಂದ್ಯದಲ್ಲಿ ಕಪ್ಪುಮಣ್ಣಿನಿಂದ ನಿರ್ಮಿತ ಪಿಚ್ ನೀಡಲಾಗಿತ್ತು. ಆದರೆ ಭಾನುವಾರ ನಡೆಯುವ ಫೈನಲ್ನಲ್ಲಿ ಇಲ್ಲಿರುವ ಕೆಂಪುಮಣ್ಣಿನ ಪಿಚ್ ಆಯ್ಕೆ ಮಾಡಿಕೊಳ್ಳಲು ಭಾರತ ತಂಡ ಚಿತ್ತ ಹರಿಸಬಹುದು ಎನ್ನಲಾಗಿದೆ.

ಕೆಂಪುಮಣ್ಣಿನ ಪಿಚ್ ಇರುವ ವಾಂಖೆಡೆ ಕ್ರೀಡಾಂಗಣದಲ್ಲಿ ಈಚೆಗೆ ನಡೆದ ಸೆಮಿಫೈನಲ್ನಲ್ಲಿ ಭಾರತದ ಬ್ಯಾಟರ್ಗಳು ಅಬ್ಬರಿಸಿದ್ದರು. ಆದ್ದರಿಂದ ಅಹಮದಾಬಾದಿನಲ್ಲಿಯೂ ಕೆಂಪುಮಣ್ಣಿನ ಅಂಗಳದತ್ತ ವಾಲಬಹುದು ಎನ್ನಲಾಗಿದೆ.

ರಿಕಿ ಮಾರ್ಟಿನ್ ಷೋ

ಪ್ಯೂರ್ಟೊ ರಿಕಾನ್ ಗ್ಯಾಮಿ ಪ್ರಶಸ್ತಿ ವಿಜೇತ ಗಾಯಕ ರಿಕಿ ಮಾರ್ಟಿನ್ ಅವರು ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರಿಗಾಗಿ ಆಸನಗಳ ಸಾಮರ್ಥ್ಯ ಇರುವ ಕ್ರೀಡಾಂಗಣ ಇದಾಗಿದೆ.

‘ದಾಂಡಿಯಾ ಕ್ವೀನ್’ ಫಾಲ್ಗುಣಿ ಪಾಠಕ್ ಮತ್ತು ಬಾಲಿವುಡ್ ಹಿನ್ನೆಲೆ ಗಾಯಕ ಸುಖ್ವಿಂದರ್ ಸಿಂಗ್ ಅವರ ಗಾಯನ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ. ಟಾಸ್ ಹಾಕುವ ಮುನ್ನ ಈ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷ ರೈಲು

ಫೈನಲ್ ಪಂದ್ಯದ ಸಂದರ್ಭದಲ್ಲಿ ಜನರ ಪ್ರಯಾಣಕ್ಕಾಗಿ ಪಶ್ವಿಮ ರೈಲ್ವೆ ವಿಭಾಗವು ಮುಂಬೈನಿಂದ ಅಹಮದಾಬಾದ್ ನಗರಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.