ಮುಂಬೈ: ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡದ ಸೆಮಿಫೈನಲ್ ಪ್ರವೇಶದ ಹಾದಿಯು ಸುಗಮವಾಗಿರಲಿಲ್ಲ. ಏಳು, ಬೀಳುಗಳ ದಾರಿಯಲ್ಲಿ ಕಷ್ಟಪಟ್ಟು ಈ ಹಂತಕ್ಕೆ ಬಂದು ನಿಂತಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ ದಾಳಿಯನ್ನು ಎದುರಿಸುವ ಸವಾಲು ಭಾರತದ ಮುಂದಿದೆ. ಹಾಲಿ ಚಾಂಪಿಯನ್ ಮತ್ತು ಆತಿಥೇಯ ಭಾರತವು ಟೂರ್ನಿಯ ಆರಂಭದಿಂದಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇದು ತಂಡದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿರುವುದು ಸುಳ್ಳಲ್ಲ.

ಅಲ್ಲದೇ ಪ್ರಸಕ್ತ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ಎದುರು ಇದುವರೆಗೆ ಒಂದೂ ಪಂದ್ಯದಲ್ಲಿ ಸರಾಗವಾಗಿ ಗೆದ್ದ ದಾಖಲೆ ಕೂಡ ತಂಡಕ್ಕಿಲ್ಲ. ಸಂದರ್ಭಕ್ಕೆ ತಕ್ಕ ತಂತ್ರಗಾರಿಕೆಯ ಮೂಲಕ ‘ಬೀಸುವ ದೊಣ್ಣೆ..’ ತಪ್ಪಿಸಿಕೊಂಡು ಗೆದ್ದಿದ್ದಾರೆ. ಸೂಪರ್ 8ರ ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತವು ಸೋತಿತ್ತು. ನಂತರದ ಎರಡೂ ಪಂದ್ಯಗಳಲ್ಲಿಯೂ ಗೆಲುವು ಸುಲಭವಾಗಿರಲಿಲ್ಲ.

ಅದರಲ್ಲೂ ‘ಕ್ವಾರ್ಟರ್ಫೈನಲ್’ ಎಂಬಂತೆ ಬಿಂಬಿತವಾಗಿದ್ದ ವೆಸ್ಟ್ ಇಂಡೀಸ್ ತಂಡದ ಎದುರು ಕೂಡ ಸಂಜು ಸ್ಯಾಮ್ಸನ್ (ಅಜೇಯ 97) ಅವರ ಏಕಾಂಗಿ ಹೋರಾಟದಿಂದಲೇ ತಂಡವು ಗೆದ್ದಿತು. 31 ವರ್ಷದ ಸಂಜು ಫಾರ್ಮ್ಗೆ ಮರಳಿದ್ದು ತಂಡದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಅವರೊಂದಿಗೆ ಇನಿಂಗ್ಸ್ ಆರಂಭಿಸುವ ಅಭಿಷೇಕ್ ಶರ್ಮಾ ಅವರೂ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಂಚುವ ನಿರೀಕ್ಷೆ ಮೂಡಿಸಿದೆ. ಇಬ್ಬರೂ ಸೇರಿ ಉತ್ತಮ ಅಡಿಪಾಯ ಹಾಕಿದರೆ; ದೊಡ್ಡ ಮೊತ್ತದ ಸೌಧ ಕಟ್ಟಬಹುದು. ಎಡಗೈ ಬ್ಯಾಟರ್ ಅಭಿಷೇಕ್ ಅವರು ಜಿಂಬಾಬ್ವೆ ಎದುರಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಪವರ್ಪ್ಲೇ ಹಂತದಲ್ಲಿ ಅವರ ಆರ್ಭಟಕ್ಕೆ ತಡೆಯೊಡ್ಡಲು ಇಂಗ್ಲೆಂಡ್ ಕೂಡ ಸ್ಪಿನ್ನರ್ ನೆರವು ಪಡೆಯುವ ಸಾಧ್ಯತೆ ಇದೆ. ಅದರಲ್ಲೂ ಉತ್ತಮ ಲಯದಲ್ಲಿರುವ ವಿಲ್ ಜ್ಯಾಕ್ಸ್ ಬೌಲಿಂಗ್ ಮಾಡುವುದು ಬಹುತೇಕ ಖಚಿತವಾಗಿದೆ.

ಎಡಗೈ ಸ್ಪಿನ್ನರ್ ಲಿಯಾಮ್ ಡಾಸನ್ ಅವರು ಮೊದಲ ಆರು ಓವರ್ಗಳಲ್ಲಿ ಬೌಲಿಂಗ್ ಮಾಡಬಹುದು. ಅಲ್ಲದೇ ಮಧ್ಯಂತರ ಓವರ್ಗಳಲ್ಲಿ ಆದಿಲ್ ರಶೀದ್ ಅವರ ಮೇಲೆ ಇಂಗ್ಲೆಂಡ್ ತಂಡವು ನಂಬಿಕೆ ಇಡಬಹುದಾಗಿದೆ. ಆತಿಥೇಯರು ಈ ಮೂವರು ಸ್ಪಿನ್ನರ್ಗಳನ್ನು ಎದುರಿಸಲು ವಿಶೇಷ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಬೇಕಾಗಿದೆ. ಮಂಗಳವಾರ ಸುಮಾರು ಮೂರು ತಾಸು ನೆಟ್ಸ್ನಲ್ಲಿ ಕಳೆದ ಭಾರತದ ಆಟಗಾರರು ಈ ಎಲ್ಲ ಸವಾಲುಗಳಿಗೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದರು.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುವ ಸೂರ್ಯ, ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅವರಿಗೆ ವಾಂಖೆಡೆ ಅಂಗಳ ಚಿರಪರಿಚಿತವಾಗಿದೆ. ಅದರಲ್ಲೂ ಸೂರ್ಯ ಅವರಿಗೆ ಇದು ತವರು.

ಆದರೆ ಈ ಮೈದಾನದ ಬೌಂಡರಿ ಅಂತರವು ಕಡಿಮೆ ಇರುವ ಕಾರಣ ಸ್ಪಿನ್ ಜೋಡಿ ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಸ್ವಲ್ಪ ಎಡವಿದರೂ ದಂಡನೆಗೊಳಗಾಗುವುದು ಖಚಿತ. ಆದ್ದರಿಂದ ಎಚ್ಚರಿಕೆಯಿಂದ ಎಸೆತಗಳನ್ನು ಹಾಕಬೇಕಾದ ಒತ್ತಡ ಅವರಿಗೆ ಇದೆ. ವೇಗಿ ಜಸ್ಪ್ರೀತ್ ಬೂಮ್ರಾ ಅವರು ಉತ್ತಮ ಲಯದಲ್ಲಿರುವುದು ಸಮಾಧಾನದ ವಿಷಯ. ಶಿವಂ ದುಬೆ ಆರನೇ ಬೌಲರ್ ಆಗಬಹುದು. ಕಳೆದ ಪಂದ್ಯದಲ್ಲಿ ಇದ್ದ ತಂಡವನ್ನೇ ಇಲ್ಲಿಯೂ ಕಣಕ್ಕಿಳಿಸುವ ಯೋಚನೆಯಲ್ಲಿರುವ ತಂಡವು ಕುಲದೀಪ್ ಯಾದವ್ ಅವರಿಗೆ ಸ್ಥಾನ ನೀಡುವುದು ಅನುಮಾನ.

ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್ ಹಾಗೂ ಆಲ್ರೌಂಡರ್ ವಿಲ್ ಜ್ಯಾಕ್ಸ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಜೋಸ್ ಬಟ್ಲರ್ ಅವರು ಫಾರ್ಮ್ನಲ್ಲಿ ಇಲ್ಲ. ಸೀಮಿತ ಓವರ್ಗಳಲ್ಲಿ ಅಮೋಘ ಸಾಧಕರಾಗಿರುವ ಬಟ್ಲರ್ ಅವರು ಇಲ್ಲಿ ಲಯಕ್ಕೆ ಮರಳದಂತೆ ನೋಡಿಕೊಳ್ಳುವತ್ತ ಬೌಲರ್ಗಳು ಚಿತ್ತ ಹರಿಸಬೇಕಿದೆ. ಆಲ್ರೌಂಡರ್ ಸ್ಯಾಮ್ ಕರನ್ ಅವರು ತಂಡಕ್ಕೆ ಆಸರೆಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಪಿಚ್ ಹೇಗಿದೆ?

ಸೆಮಿಫೈನಲ್ ಪಂದ್ಯಕ್ಕಾಗಿ ಮೀಸಲಾಗಿಟ್ಟಿರುವ ಪಿಚ್ನಲ್ಲಿ ಈಗಾಗಲೇ ಎರಡು ಪಂದ್ಯಗಳು ನಡೆದಿವೆ. ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಣ ಪಂದ್ಯ ನಡೆದಿತ್ತು. ಅದರಲ್ಲಿ 196 ರನ್ ಗುರಿ ನೀಡಿದ್ದ ವಿಂಡೀಸ್ ಗೆದ್ದಿತ್ತು. ಇನ್ನೊಂದು ಪಂದ್ಯದಲ್ಲಿ ಇಟಲಿಯು ನೇಪಾಳ ಎದುರು 10 ವಿಕೆಟ್ ಜಯ ಸಾಧಿಸಿತ್ತು. ಒಂದು ತಿಂಗಳ ಹಿಂದೆ ಭಾರತ ತಂಡವು ಟೂರ್ನಿಯ ಉದ್ಘಾಟನಾ ಪಂದ್ಯವನ್ನು ಇಲ್ಲಿ ಆಡಿತ್ತು. ಎದುರಾಳಿ ಅಮೆರಿಕ ತಂಡದ ಮಧ್ಯಮವೇಗಿ ಶಾಡ್ಲೆ ವ್ಯಾನ್ ಶಾಲ್ಕ್ವಿಕ್ ಅವರೂ ಇಲ್ಲಿ ಮಿಂಚಿದ್ದರು.

ಮುಂಬೈನಲ್ಲಿ ಹಗಲು ಹೊತ್ತಿನಲ್ಲಿ 39 ಡಿಗ್ರಿ ತಾಪಮಾನ ಇರಲಿದೆ. ರಾತ್ರಿಯಾದಂತೆ 23 ಡಿಗ್ರಿ ಸೆಲ್ಸಿಯಸ್ಗೆ ಇಳಿಯಲಿದೆ. ಆದರೆ ಧಗೆ ಹೆಚ್ಚಾಗಿರುವ ಸಾಧ್ಯತೆ ಇದೆ. ಮಳೆ ಬರುವ ಲಕ್ಷಣಗಳು ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸತತ ಮೂರನೇ ಸೆಮಿಫೈನಲ್ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸತತ ಮೂರನೇ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ. 2022ರ ಟೂರ್ನಿಯ ನಾಲ್ಕರ ಘಟ್ಟದಲ್ಲಿ ಇಂಗ್ಲೆಂಡ್ ತಂಡವು ಭಾರತಕ್ಕೆ ಸೋಲುಣಿಸಿತ್ತು. 2024ರಲ್ಲಿ ಗಯಾನದಲ್ಲಿ ನಡೆದಿದ್ದ ಸೆಮಿಫೈನಲ್ನಲ್ಲಿ ಭಾರತ ತಂಡವು ಮುಯ್ಯಿ ತೀರಿಸಿಕೊಂಡಿತ್ತು. ಆ ವರ್ಷ ಚಾಂಪಿಯನ್ ಕೂಡ ಆಗಿತ್ತು.

ಟಿ20 ವಿಶ್ವಕಪ್ನಲ್ಲಿ ಬಲಾಬಲ

ಪಂದ್ಯ; 5

ಭಾರತ ಜಯ; 3

ಇಂಗ್ಲೆಂಡ್ ಗೆಲುವು; 2

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ ತಿಲಕ್ ವರ್ಮಾ ಸಂಜು ಸ್ಯಾಮ್ಸನ್ ಶಿವಂ ದುಬೆ ಇಶಾನ್ ಕಿಶನ್ ಹಾರ್ದಿಕ್ ಪಾಂಡ್ಯ ಅರ್ಷದೀಪ್ ಸಿಂಗ್ ಜಸ್ಪ್ರೀತ್ ಬೂಮ್ರಾ ಮೊಹಮ್ಮದ್ ಸಿರಾಜ್ ವರುಣ್ ಚಕ್ರವರ್ತಿ ಕುಲದೀಪ್ ಯಾದವ್ ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್ ರಿಂಕು ಸಿಂಗ್.

ಇಂಗ್ಲೆಂಡ್: ಹ್ಯಾರಿ ಬ್ರೂಕ್ (ನಾಯಕ) ರೆಹಾನ್ ಅಹಮದ್ ಜೋಫ್ರಾ ಆರ್ಚರ್ ಟಾಮ್ ಬ್ಯಾಂಟನ್ ಜೇಕಬ್ ಬೆತೆಲ್ ಜೋಸ್ ಬಟ್ಲರ್ ಸ್ಯಾಮ್ ಕರನ್ ಲಿಯಾಮ್ ಡಾಸನ್ ಬೆನ್ ಡಕೆಟ್ ವಿಲ್ ಜ್ಯಾಕ್ಸ್ ಜೇಮಿ ಒವರ್ಟನ್ ಆದಿಲ್ ರಶೀದ್ ಫಿಲ್ ಸಾಲ್ಟ್ ಜೋಶ್ ಟಂಗ್ ಲೂಕ್ ವುಡ್.

ಪಂದ್ಯ ಆರಂಭ: ರಾತ್ರಿ7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊಹಾಟ್ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.