ಗಲ್ಲಿಗೇರಿಸುವವರು ಬೇಕಾಗಿದ್ದಾರೆ: ಶ್ರೀಲಂಕಾ ಜೈಲು ಅಧಿಕಾರಿಗಳಿಂದ ಜಾಹೀರಾತು

7

ಗಲ್ಲಿಗೇರಿಸುವವರು ಬೇಕಾಗಿದ್ದಾರೆ: ಶ್ರೀಲಂಕಾ ಜೈಲು ಅಧಿಕಾರಿಗಳಿಂದ ಜಾಹೀರಾತು

Published:
Updated:

ಕೊಲಂಬೊ: ಗಲ್ಲಿಗೇರಿಸುವ ವ್ಯಕ್ತಿ ಬೇಕಾಗಿದ್ದಾರೆ ಎಂದು ಶ್ರೀಲಂಕಾ ಸರ್ಕಾರ ಜಾಹೀರಾತು ನೀಡುತ್ತಿದೆ. ನಾಲ್ಕು ದಶಕಗಳ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ಗಲ್ಲುಶಿಕ್ಷೆಯನ್ನು ಮತ್ತೆ ಆರಂಭಿಸಲು ಮುಂದಾಗಿದ್ದಾರೆ.

ಫಿಲಿಪ್ಪೀನ್ಸ್‌ನಲ್ಲಿ ಮಾದಕವಸ್ತುಗಳ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ ಕೈಗೊಂಡ ಕ್ರಮಗಳಿಂದ ಪ್ರೇರಣೆ ಪಡೆದಿರುವ ಲಂಕಾ ತಮ್ಮ ದೇಶದಲ್ಲೂ ಅಂತಹುದೇ ಕ್ರಮ ಜಾರಿಗೊಳಿಸಲು ಮುಂದಾಗಿದೆ. 

ಗಲ್ಲಿಗೇರಿಸುವ ವ್ಯಕ್ತಿಯ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ‘ದೃಢವಾದ ಮಾನಸಿಕ ಶಕ್ತಿ’ ಮತ್ತು ‘ಅತ್ಯುತ್ತಮವಾದ ನೈತಿಕ ಗುಣ’ ಹೊಂದಿರಬೇಕು ಎಂದು ಜೈಲಿನ ಅಧಿಕಾರಿಗಳು ನೀಡಿರುವ ಜಾಹೀರಾತಿನಲ್ಲಿ ತಿಳಿಸಲಾಗಿದೆ. 

ಕೇವಲ ಎರಡೇ ಹುದ್ದೆಗಳು ಖಾಲಿ ಇದ್ದು, ಶ್ರೀಲಂಕಾ ಪ್ರಜೆಯಾಗಿದ್ದು 18 ರಿಂದ 45 ವರ್ಷದೊಳಗಿನರು ಅರ್ಜಿ ಸಲ್ಲಿಸಬಹುದು. 

ಗಲ್ಲುಶಿಕ್ಷೆಗೆ 1976ರಲ್ಲಿ ನಿಷೇಧ ಹೇರಿದ ನಂತರ ಈವರೆಗೆ ಯಾವುದೇ ಅಪರಾಧಿಯನ್ನು ನೇಣಿಗೇರಿಸಿಲ್ಲ. ಇದೀಗ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ  ಅವರು ಮರಣದಂಡಣೆಯನ್ನು ಎರಡು ತಿಂಗಳಲ್ಲಿ ಜಾರಿಗೊಳಿಸಲು ಮುಂದಾಗಿದ್ದಾರೆ. 

ಮಾದಕವಸ್ತುಗಳಿಗೆ ಸಂಬಂಧಿತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಮರಣದಂಡನೆ ವಿಧಿಸಲು ಬದ್ದರಾಗಿರುವುದಾಗಿ ಸಿರಿಸೇನಾ ಅವರು ಸಂಸತ್‌ಗೆ ತಿಳಿಸಿದ್ದರು. 

ಕಳೆದ ತಿಂಗಳು ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿದ್ದ ಸಿರಿಸೇನಾ ಅವರು ಆ ದೇಶದಲ್ಲಿ ಅಕ್ರಮ ಮಾದಕವಸ್ತುಗಳ ಕೃತ್ಯಗಳನ್ನು ನಿರ್ವಹಿಸುವ ಬಗ್ಗೆ ಅಲ್ಲಿನ ಅಧ್ಯಕ್ಷ ರೋಡ್ರಿಗೊ ಡುಟೆರೆಟೆ ಅವರಿಂದ ಮಾಹಿತಿ ಪಡೆದಿದ್ದರು. 

ಹತ್ಯೆ, ಅತ್ಯಾಚಾರ, ಮಾದಕವಸ್ತುಗಳ ಅಪರಾಧ ಮುಂತಾದವುಗಳಿಗೆ ಶ್ರೀಲಂಕಾದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗುತಿತ್ತು. ಆದರೆ ಅವರನ್ನು ನೇಣಿಗೇರಿಸುತ್ತಿರಲಿಲ್ಲ. ಬದಲಿಗೆ ಜೀವಾವಧಿ ಶಿಕ್ಷೆ ನೀಡಲಾಗುತಿತ್ತು. 

ಕೊಲಂಬೊದಲ್ಲಿನ ಮುಖ್ಯ ಕಾರಾಗೃಹದಲ್ಲಿ ಅಪರಾಧಿಗಳನ್ನು ನೇಣಿಗೇರಿಸುತ್ತಿದ್ದ ವ್ಯಕ್ತಿ 2014ರಲ್ಲಿ ನಿವೃತ್ತಿಯಾದ ನಂತರ ಹುದ್ದೆ ಖಾಲಿಯಾಗಿತ್ತು. ಆನಂತರ ಮೂವರನ್ನು ನೇಮಕ ಮಾಡಿಕೊಂಡಿದ್ದರೂ ಅವರು ತಮಗೆ ಯಾವುದೇ ಕೆಲಸ ಇಲ್ಲ ಎಂದು ರಾಜೀನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !