ಶ್ರೀಲಂಕಾ ಸಂಸತ್‌ ವಿಸರ್ಜನೆಗೆ ಸುಪ್ರೀಂ ಕೋರ್ಟ್‌ ತಡೆ

7

ಶ್ರೀಲಂಕಾ ಸಂಸತ್‌ ವಿಸರ್ಜನೆಗೆ ಸುಪ್ರೀಂ ಕೋರ್ಟ್‌ ತಡೆ

Published:
Updated:

ಕೊಲಂಬೊ: ಅವಧಿಗಿಂತ ಮೊದಲೇ ಸಂಸತ್ತನ್ನು ವಿಸರ್ಜಿಸಿದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ನಿರ್ಧಾರಕ್ಕೆ ಶ್ರೀಲಂಕಾ ಸುಪ್ರೀಂಕೋರ್ಟ್ ಮಂಗಳವಾರ ತಡೆ ನೀಡಿದೆ.

ಇದರಿಂದ ಶ್ರೀಲಂಕಾ ರಾಜಕೀಯ ಅಸ್ಥಿರತೆ ಹೊಸ ತಿರುವು ಪಡೆದುಕೊಂಡಿದೆ.

ಅವಧಿಗಿಂತ ಮೊದಲೇ ಸಂಸತ್ತನ್ನು ವಿಸರ್ಜಿಸಿದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ನಿರ್ಧಾರವನ್ನು ಪ್ರಶ್ನಿಸಿ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಸದಸ್ಯರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. 

ಪದಚ್ಯುತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ, ಪ್ರಮುಖ ಪ್ರತಿಪಕ್ಷ ತಮಿಳ್ ನ್ಯಾಷನಲ್ ಅಲಯೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ ಸೇರಿದಂತೆ 10 ಪಕ್ಷಗಳು ಅರ್ಜಿ ಸಲ್ಲಿಸಿದ್ದವು. ಚುನಾವಣಾ ಆಯೋಗದ ಸದಸ್ಯ ಪ್ರೊ. ರತ್ನಜೀವನ ಹೂಲೆ ಅವರೂ ಸಿರಿಸೇನಾ ಕ್ರಮ ಸಮರ್ಥನೀಯವಲ್ಲ ಎಂದು ವಾದ ಮಂಡಿಸಿದ್ದರು. 

ಪದಚ್ಯುತ ಪ್ರಧಾನಿ ರನಿಲ್ ವಿಕ್ರಮಸಿಂಘೆ ಪರವಾಗಿ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಲಯ ತಾಂತ್ರಿಕ ಕಾರಣಗಳಿಂದಾಗಿ ಶ್ರೀಲಂಕಾ ಅಧ್ಯಕ್ಷರ ನಿರ್ಧಾರಕ್ಕೆ ತಡೆ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. 

 ಅಕ್ಟೋಬರ್ 9ರಂದು ಸಂಸತ್ ವಿಸರ್ಜಿಸಿದ್ದ ಸಿರಿಸೇನಾ, ಚುನಾವಣೆ ಘೋಷಿಸಿದ್ದರು. ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ, ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರು.

ಸಂಸತ್ತಿನ 225 ಸದಸ್ಯರ ಪೈಕಿ 113 ಸದಸ್ಯರ ಬೆಂಬಲವನ್ನು ರಾಜಪಕ್ಸೆ ಅವರು ಸಾಬೀತುಪಡಿಸಬೇಕಿದೆ.

ನವೆಂಬರ್ 14ರಂದು ಬಹುಮತ ಸಾಬೀತು ಪರೀಕ್ಷೆ ನಿಗದಿಯಾಗಿದೆ. ಅಂದು ಸಂಸದರ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಸಿರಿಸೇನಾ ಹೇಳಿಕೆ ನೀಡಿದ್ದಾರೆ. ಸಂಸತ್ ವಿಸರ್ಜನೆಯ ತಮ್ಮ ನಡೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !