ಶ್ರೀಲಂಕಾ ಪ್ರಧಾನಿ ಹುದ್ದೆಯಿಂದ ಪದಚ್ಯುತಿ: ಕೋರ್ಟ್‌ ಮೊರೆ ಹೋಗಲು ಸಿಂಘೆ ನಿರ್ಧಾರ

7
ಚುನಾವಣೆ–ಕಾನೂನು ಸಮರದ ಸಂಧಿಗ್ಧದಲ್ಲಿ ಶ್ರೀಲಂಕಾ ರಾಜಕೀಯ

ಶ್ರೀಲಂಕಾ ಪ್ರಧಾನಿ ಹುದ್ದೆಯಿಂದ ಪದಚ್ಯುತಿ: ಕೋರ್ಟ್‌ ಮೊರೆ ಹೋಗಲು ಸಿಂಘೆ ನಿರ್ಧಾರ

Published:
Updated:
Deccan Herald

ಕೊಲೊಂಬೊ: ಶ್ರೀಲಂಕಾದ ಪ್ರಧಾನಿ ಹುದ್ದೆಯಿಂದ ತಮ್ಮನ್ನು ಪದಚ್ಯುತಗೊಳಿಸಿದ ರಾಷ್ಟ್ರಪತಿ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ರನಿಲ್‌ ವಿಕ್ರಮಸಿಂಘೆ ನಿರ್ಧರಿಸಿದ್ದಾರೆ. 

‘ಯುನೈಟೆಡ್‌ ನ್ಯಾಷನಲ್‌ ಪಾರ್ಟಿ (ಯುಎನ್‌ಪಿ) ನೇತೃತ್ವದ ಸರ್ಕಾರವನ್ನು ರಾಷ್ಟ್ರಪತಿ ಮೈತ್ರಿಪಾಲ ಸಿರಿಸೇನಾ ವಜಾಗೊಳಿಸಿದ್ದು ಸಂವಿಧಾನ ವಿರೋಧಿ ಕ್ರಮ. ಈ ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು’ ಎಂದು ಯುಎನ್‌ಪಿ ಮನವಿ ಮಾಡಿದೆ. 

ಕಳೆದ ಅಕ್ಟೋಬರ್‌ 26ರಂದು ವಿಕ್ರಮಸಿಂಘೆ ಸರ್ಕಾರವನ್ನು ವಜಾಗೊಳಿಸಿದ್ದ ಸಿರಿಸೇನಾ, ಮಹಿಂದಾ ರಾಜಪಕ್ಸೆಯವರನ್ನು ಪ್ರಧಾನಮಂತ್ರಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ರಾಜಪಕ್ಸೆ ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸಲು ವಿಫಲರಾಗಿದ್ದರಿಂದ, ಜನವರಿ 5ರಂದು ಚುನಾವಣೆ ನಡೆಸುವುದಾಗಿ ಸಿರಿಸೇನಾ ಘೋಷಿಸಿದ್ದಾರೆ.  ಇದರಿಂದ ಅವಧಿ ಪೂರ್ಣಗೊಳ್ಳುವುದಕ್ಕೆ ಎರಡು ವರ್ಷ ಮುನ್ನವೇ ಚುನಾವಣೆ ನಡೆಯುವಂತಾಗಿದೆ.

‘ಸ್ಪೀಕರ್‌ ಕರು ಜಯಸೂರ್ಯ ಅವರು ಕಾನೂನು ಬಾಹಿರವಾಗಿ ನೀಡಿದ ನಿರ್ದೇಶನದಂತೆ ಸಂಸತ್ತನ್ನು ವಜಾಗೊಳಿಸಲಾಗಿದೆ’ ಎಂದು ಸಚಿವ, ಸಿರಿಸೇನಾ ಅವರ ಬೆಂಬಲಿಗ ದಿನೇಶ ಗುಣವರ್ಧನೆ ಹೇಳಿದ್ದಾರೆ. 

‘ಸಿರಿಸೇನಾ ಅವರು ಕಾನೂನನ್ನು ಎತ್ತಿಹಿಡಿದು, ಸಂಸತ್ತಿನ ನಿಯಮಾವಳಿಯಂತೆ ಕಾರ್ಯನಿರ್ವಹಿಸಬೇಕು’ ಎಂದು ಪಾಶ್ಚಾತ್ಯ ದೇಶಗಳು ಒತ್ತಾಯಿಸಿವೆ.

‘ದೇಶದ ಮೂಲ ಕಾನೂನನ್ನು ರಕ್ಷಿಸಲು ಎಲ್ಲರೂ ಒಗ್ಗೂಡಬೇಕಾದ ಅಗತ್ಯವಿದೆ’ ಎಂದು ಮಾರ್ಕ್ಸಿಸ್ಟ್‌ ಜೆವಿಪಿ ಹಿರಿಯ ಸದಸ್ಯ ವಿಜಿತ ಹೆರಾತ್‌ ಹೇಳಿದ್ದಾರೆ.

ನವೆಂಬರ್‌ 19ರಿಂದ 26ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಜನವರಿ 5ರಂದು ಮತದಾನ ನಡೆಯಲಿದ್ದು, 17ಕ್ಕೆ ಹೊಸ ಸಂಸತ್ತು ರಚನೆಯಾಗಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !