ಶ್ರೀಲಂಕಾ: ಸೇಡಿಗಾಗಿ ಸರಣಿ ಸ್ಫೋಟ!

ಗುರುವಾರ , ಮೇ 23, 2019
24 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿನ ಮಸೀದಿ ಮೇಲೆ ನಡೆದ ದಾಳಿಗೆ ಪ್ರತಿದಾಳಿ : ರಕ್ಷಣಾ ಸಚಿವ

ಶ್ರೀಲಂಕಾ: ಸೇಡಿಗಾಗಿ ಸರಣಿ ಸ್ಫೋಟ!

Published:
Updated:
Prajavani

ಕೊಲಂಬೊ: ‘ಈಸ್ಟರ್‌ ದಿನ ಶ್ರೀಲಂಕಾದ ಚರ್ಚ್‌ಗಳು, ಐಷಾರಾಮಿ ಹೋಟೆಲುಗಳನ್ನು ಗುರಿಯಾಗಿಸಿಕೊಂಡು ನಡೆದ ಸರಣಿ ಬಾಂಬ್‌ ಸ್ಫೋಟ,ನ್ಯೂಜಿಲೆಂಡ್‌ನಲ್ಲಿ ಮಸೀದಿ ಮೇಲೆ ನಡೆದ ದಾಳಿಯ ಸೇಡಿಗಾಗಿ ನಡೆಸಿರುವ ಕೃತ್ಯ’ ಎಂದು ರಕ್ಷಣಾ ಸಚಿವ ರುವಾನ್‌ ವಿಜೆವರ್ದನೆ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. 

‘ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ಮಸೀದಿ ಮೇಲೆ ನಡೆಸಿದ ದಾಳಿಗೆ ಪ್ರತಿಯಾಗಿ, ಶ್ರೀಲಂಕಾದ ಸ್ಥಳೀಯ ಇಸ್ಲಾಮಿಕ್‌ ಉಗ್ರರು ಈ ಸ್ಫೋಟ ನಡೆಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. 

ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿ ಮೇಲೆ ಮಾರ್ಚ್‌ 15ರಂದು ಉಗ್ರನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 50 ಮಂದಿ ಅಸುನೀಗಿದ್ದರು. 

‘ಮುಸ್ಲಿಂ ಸಮುದಾಯವು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಅವರು ಈ ದಾಳಿಯ ವಿರುದ್ಧವಾಗಿದ್ದಾರೆ. ಆದರೆ, ಕೆಲವರು ಮಾತ್ರ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ. 

‘ಭಯೋತ್ಪಾದನೆ ನಿಗ್ರಹದಲ್ಲಿ ಅಂತರರಾಷ್ಟ್ರೀಯ ಸಮುದಾಯ ಶ್ರೀಲಂಕಾ ಬೆಂಬಲಕ್ಕೆ ನಿಂತಿದೆ’ ಎಂದೂ ಅವರು ತಿಳಿಸಿದ್ದಾರೆ. 

‘ಮೃತರಲ್ಲಿ 45 ಮಕ್ಕಳು’ (ಜಿನಿವಾ -ಎಎಫ್‌ಪಿ ವರದಿ): ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ ಮೃತ
ಪಟ್ಟವರ ಪೈಕಿ 45 ಮಕ್ಕಳೂ ಸೇರಿವೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ. 

‘ಭದ್ರತೆ ಒದಗಿಸುವುದು ಕಷ್ಟವಾಗಿತ್ತು’

‘ಇಂಥ ದೊಡ್ಡದಾದ, ತೀವ್ರವಾದ ದಾಳಿ ಶ್ರೀಲಂಕಾ ಮೇಲೆ ನಡೆಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೊ ಹೇಳಿದ್ದಾರೆ.

‘ಈಸ್ಟರ್‌ ದಿನವಾಗಿದ್ದರಿಂದ ಎಲ್ಲ ಚರ್ಚ್‌ಗಳಲ್ಲಿಯೂ ಸಾಕಷ್ಟು ಜನ ಸೇರಿದ್ದರು. ಗುಪ್ತಚರ ಮಾಹಿತಿ ನಡುವೆಯೂ ಇಂಥ ದೊಡ್ಡ ದಾಳಿಯಿಂದ ಜನರನ್ನು ರಕ್ಷಿಸುವುದು ಕಷ್ಟವಾಗಿತ್ತು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಪ್ರಜಾಪ್ರಭುತ್ವ ರಾಷ್ಟ್ರವಾದ ಶ್ರೀಲಂಕಾದಲ್ಲಿ ಈವರೆಗೆ ತುರ್ತು ಪರಿಸ್ಥಿತಿ ಘೋಷಣೆಯಾಗಿರಲಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ತನ್ನ ಕೈಲಾದ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಮುಸ್ಲಿಂ ಸಹೋದರರಿಂದ ಆತ್ಮಹತ್ಯಾ ದಾಳಿ’

‘ಶಾಂಗ್ರಿಲಾ ಮತ್ತು ಸಿನ್ನಾಮನ್‌ ಗ್ರ್ಯಾಂಡ್‌ ಹೋಟೆಲ್‌ ಮೇಲೆ ಆತ್ಮಹತ್ಯಾ ದಾಳಿ ನಡೆಸಿದವರು ಇಬ್ಬರು ಮುಸ್ಲಿಂ ಸಹೋದರರು’ ಎಂದು ಪೊಲೀಸರು ಹೇಳಿದ್ದಾರೆ.

‘ಇವರು ಕೊಲಂಬೊದ ಸಾಂಬಾರು ಪದಾರ್ಥ ವ್ಯಾಪಾರಿಯ ಮಕ್ಕಳು. ಗ್ರಾಹಕರ ರೀತಿ ಹೋಟೆಲ್‌ ಪ್ರವೇಶಿಸಿದ ಇವರು ಉಪಾಹಾರ ಖರೀದಿಸುವ ನೆಪದಲ್ಲಿ ಸರದಿಯಲ್ಲಿದ್ದರು. ಈ ವೇಳೆ ತಮ್ಮನ್ನು ಸ್ಫೋಟಿಸಿಕೊಂಡಿದ್ದರು’ ಎಂದು ಅವರು ತಿಳಿಸಿದ್ದಾರೆ. ಈ ಇಬ್ಬರೂ ಸಹೋದರರ ಹೆಸರು ಬಹಿರಂಗಪಡಿಸಿಲ್ಲ. ಆದರೆ, ಇವರಿಬ್ಬರೂ ಎನ್‌ಟಿಜೆ ಸಂಘಟನೆಯ ಸದಸ್ಯರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೈ ಅಲರ್ಟ್‌ ಘೋಷಣೆ

ಸ್ಫೋಟಕಗಳನ್ನು ತುಂಬಿದ ವಾಹನವೊಂದು ಕೊಲಂಬೊದತ್ತ ಬರುತ್ತಿದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಕಟ್ಟೆಚ್ಚರ ವಹಿಸಲು ಎಲ್ಲ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಲಾಗಿದೆ.

ಪೊಲೀಸರು ಕೊಲಂಬೊ ಬಂದರಿನಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 11

  Angry

Comments:

0 comments

Write the first review for this !