ಅಂಚೆಪಾಳ್ಯದ ಈ ಹೋಟೆಲ್‌ ಬಲ್ಲಿರಾ?

7

ಅಂಚೆಪಾಳ್ಯದ ಈ ಹೋಟೆಲ್‌ ಬಲ್ಲಿರಾ?

Published:
Updated:
Deccan Herald

ದೂರದ ಪ್ರಯಾಣ ಬೆಳೆಸುವ ಸಂದರ್ಭಗಳಲ್ಲಿ ಶುದ್ಧ, ರುಚಿಕರ ಆಹಾರವನ್ನು ಹುಡುಕಿಕೊಂಡು ಹೋಗುವುದು ಸಹಜ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸುವವರಿಗೆ ಸಾಕಷ್ಟು ಹೋಟೆಲ್‌ಗಳ ಆಯ್ಕೆಗಳು ಇವೆ. ಕೆಂಗೇರಿ ದಾಟುತ್ತಿದ್ದಂತೆ ಅಂಚೆಪಾಳ್ಯದಲ್ಲಿರುವ ಶ್ರೀನಿಧಿ ಸಾಗರ್‌ ಡಿಲಕ್ಸ್‌ ಹೋಟೆಲ್‌ ಅವುಗಳಲ್ಲಿ ಒಂದು.

ಇಲ್ಲಿನ ರುಚಿ ರುಚಿಯಾದ ಪೊಂಗಲ್, ಬಿಸಿಬೇಳೆ ಬಾತ್, ಪುಳಿಯೋಗರೆ, ಮೆದು ದೋಸೆ, ನೀರು ದೋಸೆ, ಮಸಾಲೆ ದೋಸೆಯ ಘಮಲು ಪ್ರಯಾಣಿಕರನ್ನು ಕೈ ಬೀಸಿ ಸೆಳೆಯುತ್ತದೆ.

ಇಲ್ಲಿನ ಆಹಾರವನ್ನು ಒಮ್ಮೆ ಸವಿದವರು ಮತ್ತೆ ಮತ್ತೆ ಬರುವರು ಎನ್ನುತ್ತಾರೆ ಹೋಟೆಲ್‌ ಸಿಬ್ಬಂದಿ. ಹೋಟೆಲ್ ಹೋಟೆಲ್‌ನ ಒಳಾಂಗಣ ಜನರಿಂದ ತುಂಬಿಹೋಗಿದ್ದರೂ ಊಟ, ತಿಂಡಿಯ ಸ್ವಾದವನ್ನು ಸವಿದೇ ಹೋಗಬೇಕೆನ್ನುವ ಪ್ರಯಾಣಿಕರು ಹೊರಾಂಗಣದಲ್ಲಿ ನಿಂತು ಸವಿಯುತ್ತಾರೆ. ಈ ರಸ್ತೆಯಲ್ಲಿ ಪ್ರಯಾಣಿಸುವ ಮೈಸೂರು, ಮಡಿಕೇರಿ, ಕೇರಳದ ಪ್ರವಾಸಿಗರು, ಹಲವು ನಟ- ನಟಿಯರು, ಸಾಹಿತಿಗಳು, ಉದ್ಯಮಿಗಳು ಈ ಹೋಟೆಲ್‍ನ ಸ್ವಾದವನ್ನು ಸವಿದೇ ತಮ್ಮ ಪ್ರಯಾಣವನ್ನು ಮುಂದುವರೆಸುವಷ್ಟು ಜನಪ್ರಿಯತೆಯನ್ನು ಗಳಿಸಿದೆ ಎಂದು ಹೋಟೆಲ್ ಮಾಲೀಕ ವಸಂತ್‌ ಕೆ. ಹೆಮ್ಮೆಯಿಂದ ಹೇಳುತ್ತಾರೆ.

ಮನೆಯಲ್ಲಿ ಮಾಡುವಂತೆಯೇ ಅಡುಗೆಗೆ ಬೇಕಾದಂತಹ ಸಾಂಬಾರ್ ಪುಡಿ, ರಸಂ ಪುಡಿ, ಮತ್ತಿತರ ಮಸಾಲೆ ಪದಾರ್ಥಗಳನ್ನು ಆಯಾ ದಿನಕ್ಕೆ ಬೇಕಾಗುವಷ್ಟನ್ನು ಮಾತ್ರ ಹೋಟೆಲ್‍ನಲ್ಲಿಯೇ ಸಿದ್ಧಪಡಿಸಿಕೊಳ್ಳಲಾಗುತ್ತದೆ. ನಾಟಿ ರುಚಿಯಲ್ಲಿನ ಆಹಾರ ತಯಾರಿಕೆಗೆ ಹೆಚ್ಚಿನ ಗಮನ ನೀಡಲು ಶ್ರಮಿಸಲಾಗುತ್ತದೆ. ಇಲ್ಲಿನ ಬಹುತೇಕ ತಿಂಡಿ ತಿನಿಸುಗಳಿಗೆ ಸಾವಯವ ಸಿರಿಧಾನ್ಯಗಳನ್ನೇ ಬಳಸುವುದು ಈ ಹೋಟೆಲ್‍ನ ಮತ್ತೊಂದು ವಿಶೇಷ.

ಬೆಳಿಗ್ಗೆ 7 ಗಂಟೆಗೆ ಆರಂಭಗೊಳ್ಳುವ ಹೋಟೆಲ್ ರಾತ್ರಿ 10.30ರವರೆಗೆ ತೆರೆದಿರುತ್ತದೆ. ಅಕ್ಕಿ, ರಾಗಿ, ರವೆಗಳಿಂದ ತಯಾರಿಸಿದ ರೊಟ್ಟಿ, ತರಹೇವಾರಿ ಪಲ್ಯಗಳು, ರುಚಿಕರ ಪುಳಿಯೋಗರೆ, ಬಿಸಿಬೇಳೆಬಾತ್, ಸಿಹಿ ಪೊಂಗಲ್‌, ಖಾರ ಪೊಂಗಲ್‌ ಗ್ರಾಹಕರ ಅಚ್ಚುಮೆಚ್ಚಿನ ತಿಂಡಿಗಳು.

ಬಾದಾಮಿ, ಗೋಡಂಬಿ ತುಂಬಿರುವ ದಕ್ಷಿಣ ಭಾರತದ ತಿಂಡಿ–ತಿನಿಸುಗಳು, ಜತೆಗೆ ಚನ್ನಾ ಬತೂರ, ಪರೋಟ, ನಾನ್ ಕುಲ್ಚಾ, ಸೂಪ್, ಸಲಾಡ್, ಗೋಬಿ ಮಂಚೂರಿ, ಅಣಬೆ ಮಂಚೂರಿಯಂತಹ ಉತ್ತರ ಭಾರತ ಶೈಲಿಯ ತಿಂಡಿ ತಿನಿಸುಗಳು ಹಾಗೂ ಮನ ತಣಿಸುವ ಜ್ಯೂಸ್, ಐಸ್‍ಕ್ರೀಂ ಸಹ ಇಲ್ಲಿ ಲಭ್ಯ. ಗ್ರಾಹಕರ ಮನೆಗೆ ಆಹಾರ ಸರಬರಾಜು ಮಾಡುವ ವ್ಯವಸ್ಥೆಯೂ ಇಲ್ಲಿದೆ. 

ರೆಸ್ಟೊರೆಂಟ್: ಶ್ರೀನಿಧಿ ಸಾಗರ್‌ ಡಿಲಕ್ಸ್ ಹೋಟೆಲ್‌

ವಿಶೇಷ : ಸಾವಯವ ಸಿರಿಧಾನ್ಯ ತಿನಿಸುಗಳು

ಸ್ಥಳ: ಅಂಚೆಪಾಳ್ಯ, ಬೆಂಗಳೂರು– ಮೈಸೂರು ರಸ್ತೆ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !