ಶನಿವಾರ, ಸೆಪ್ಟೆಂಬರ್ 18, 2021
22 °C

ಕಾಕೋಳು ಸರ್ಕಾರಿ ಶಾಲೆ: ಶೇ 93 ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ಕಾಕೋಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93ರಷ್ಟು ಫಲಿತಾಂಶದ ಸಾಧನೆ ಮಾಡಿದೆ.

8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಮತ್ತು 31 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 45 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರಲ್ಲಿ ಜಲಜಾ 595 ಅಂಕ ಗಳಿಸಿದ್ದಾರೆ.

ಗ್ರಾಮದ ಕೆ.ಎಂ.ಮೂರ್ತಿ ಮತ್ತು ಅಂಜನಮ್ಮ ದಂಪತಿಯ ಹಿರಿಯ ಮಗಳಾದ ಜಲಜಾ, ಬಡತನದ ಬವಣೆಯಲ್ಲಿಯೂ ಈ ಸಾಧನೆ ಮಾಡಿದ್ದಾಳೆ.  

‘ಖಾಸಗಿ ಶಾಲೆಗೆ ಹಣ ಕಟ್ಟಿ ಓದಿಸುವ ಶಕ್ತಿ ನಮಗೆ ಇರಲಿಲ್ಲ. ಸರ್ಕಾರಿ ಶಾಲೆಗೆ ಸೇರಿಸಿದ್ದೇವು. ಶಿಕ್ಷಕರು ಉತ್ತಮ ಶಿಕ್ಷಣ ನೀಡಿದ್ದಾರೆ’ ಎಂದು ಪೋಷಕರು, ಶಾಲೆಯ ಬಗ್ಗೆ ಮೆಚ್ಚುಗೆ ಮಾತನಾಡಿದರು.  

‘ಪಾಂಚಜನ್ಯ ಸಂಸ್ಥೆಯವರು ನುರಿತ ಶಿಕ್ಷಕರನ್ನು ಬೆಂಗಳೂರಿನಿಂದ ಕರೆಸಿ ನಮಗಾಗಿ ಪಾಠ ಹೇಳಿಸಿದರು. ಓದುವ ಬಗ್ಗೆ, ಅದನ್ನು ಅರ್ಥ ಮಾಡಿಕೊಳ್ಳುವ ವಿಧಾನಗಳನ್ನು ತಿಳಿಸಿಕೊಟ್ಟರು. ಭಾನುವಾರವೂ ವಿಶೇಷ ತರಗತಿಗಳನ್ನು ನಡೆಸಿ ಅಂಕ ಗಳಿಸಲು ನೆರವಾದರು’ ಎಂದು ವಿದ್ಯಾರ್ಥಿನಿ ಜಲಜಾ ಹೇಳಿದರು.  

ಮುಖ್ಯ ಶಿಕ್ಷಕ ಓಂಕಾರ್ ನಾಯ್ಕ,‘ಮಕ್ಕಳ ಓದಿಗಾಗಿ ಪಾಂಚಜನ್ಯ ಸಂಸ್ಥೆಯವರು ಸೋಲಾರ್ ದೀಪಗಳನ್ನು ನೀಡಿ ನೇರವಾದರು. ಸ್ಮಾರ್ಟ್ ಕ್ಲಾಸ್‌ಗಳನ್ನು ರೂಪಿಸಲು ಲ್ಯಾಪ್‍ಟಾಪ್‍ಗಳನ್ನು ಒದಗಿಸಿದರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು