ಅಂಧ ಮಕ್ಕಳ ಶಾಲೆಯ ಅತ್ಯುತ್ತಮ ಸಾಧನೆ

ಭಾನುವಾರ, ಮೇ 26, 2019
28 °C

ಅಂಧ ಮಕ್ಕಳ ಶಾಲೆಯ ಅತ್ಯುತ್ತಮ ಸಾಧನೆ

Published:
Updated:

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ಆಶಾಕಿರಣ ಅಂಧ ಮಕ್ಕಳ ಶಾಲೆಯ ಎಂಟು ಮಂದಿ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬರೆದಿದ್ದು, ಎಲ್ಲರೂ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

1992ರಲ್ಲಿ ಆರಂಭವಾದ ಅಂಧಮಕ್ಕಳ ಶಾಲೆಯು ತಾಲ್ಲೂಕು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಅಂಧ ಮಕ್ಕಳಿಗೆ ಶೈಕ್ಷಣಿಕ ಅಗತ್ಯತೆ ಪೂರೈಸುತ್ತಿದೆ.

2009ರಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಮೊದಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು. ಅಂದಿನಿಂದ ಶಾಲೆಯು ಪ್ರತಿ ವರ್ಷ ಶೇ 100ರಷ್ಟು ಫಲಿತಾಂಶವ ಪಡೆಯುತ್ತಿದೆ.

‘ಕಣ್ಣಿರದಿದ್ದರೂ ಮಕ್ಕಳಲ್ಲಿ ಅಪಾರ ಪ್ರತಿಭೆ ಇದೆ. ಹೆಚ್ಚು ಅಂಕ ಪಡೆದು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ ಎಂದು ಶಾಲೆಯ ಸಂಯೋಜಕ ಗೋಪಾಲಯ್ಯ ತಿಳಿಸಿದರು.

ಪರೀಕ್ಷೆ ಬರೆದ ಮಕ್ಕಳು ಪಿ. ಗೌತಮಿ (462), ಆರ್.ಹರೀಶ್ (462), ಸಂದೀಪ್ (454), ನಾಗಾರ್ಜುನ (447), ಬಸವರಾಜು (419), ಆರ್.ಜ್ಯೋತಿ (414), ಎಲ್. ಸುನಿಲ್ (400), ಬಿ.ಪವನ್ (396).

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !