‘ಸ್ಪೈಡರ್‌ಮ್ಯಾನ್‌’ ಸೃಷ್ಟಿಕರ್ತ ಲೀ ನಿಧನ

7

‘ಸ್ಪೈಡರ್‌ಮ್ಯಾನ್‌’ ಸೃಷ್ಟಿಕರ್ತ ಲೀ ನಿಧನ

Published:
Updated:
Deccan Herald

ಲಾಸ್‌ ಏಂಜಲೀಸ್‌: ಮಾರ್ವೆಲ್‌ ಕಾಮಿಕ್ಸ್‌ನ ಸಂಪಾದಕ, ಸ್ಪೈಡರ್‌ ಮ್ಯಾನ್‌, ಎಕ್ಸ್‌–ಮೆನ್‌, ಥೋರ್‌, ಐರನ್‌
ಮ್ಯಾನ್‌, ಬ್ಲ್ಯಾಕ್‌ ಪ್ಯಾಂಥರ್‌ ನಂತಹ ಕಾಮಿಕ್‌ ಪಾತ್ರಗಳ ಸೃಷ್ಟಿಕರ್ತ ಸ್ಟ್ಯಾನ್‌ ಲೀ (95) ಸೋಮವಾರ ಇಲ್ಲಿ ನಿಧನರಾದರು.

ಹಾಸ್ಯ ಲೇಖಕರೂ ಆಗಿದ್ದ ಲೀ, ಸಾಹಸ, ವಿಡಂಬನೆ, ವೈಜ್ಞಾನಿಕ ಕಥೆಗಳ ಮೂಲಕ ವಿಶ್ವದೆಲ್ಲೆಡೆ ಅಪಾರ ಓದುಗರನ್ನು ಗಳಿಸಿದ್ದರು.

ವಿಶಿಷ್ಟ ಕಾಮಿಕ್‌ಗಳನ್ನು ರಚಿಸುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಲು ಕಾರಣೀಕರ್ತರೂ ಆಗಿದ್ದರು. ಸಾಹಿತ್ಯಿಕ ಸಮಾರಂಭಗಳಲ್ಲಿ ಓದುಗರೊಂದಿಗೆ ಸಂವಾದ ನಡೆಸಲು ಅವರು ಹೊಂದಿದ್ದ ಒಲವು ಅಪಾರ ಮೆಚ್ಚುಗೆ ಗಳಿಸಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !