ರಾಜ್ಯ ಶಿಕ್ಷಣ ನೀತಿ ರೂಪಿಸಲು ಆಗ್ರಹ

7

ರಾಜ್ಯ ಶಿಕ್ಷಣ ನೀತಿ ರೂಪಿಸಲು ಆಗ್ರಹ

Published:
Updated:
Deccan Herald

ಬೆಂಗಳೂರು: ಸರ್ಕಾರಿ ಶಾಲೆ ಉಳಿಸಿ, ಬೆಳೆಸಲು ‘ಹೊಸ ಶಿಕ್ಷಣ ನೀತಿ’ ಜಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ವಿವಿಧ ಸಮಾಜಮುಖಿ ಸಂಘಟನೆ ಮತ್ತು ಶಿಕ್ಷಣ ಪ್ರೇಮಿಗಳು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಸಮಾವೇಶಗೊಂಡು ಚರ್ಚಿಸಿದರು.

ಈ ಸಂಘಟನೆಗಳು ಆರಂಭಿಸಿರುವ ‘ಮಿಸ್ಡ್‌ ಕಾಲ್ ಆಂದೋಲನ’ಕ್ಕೆ ಈವರೆಗೂ 2 ಲಕ್ಷಕ್ಕೂ ಹೆಚ್ಚು ಜನ ಸ್ಪಂದಿಸಿದ್ದಾರೆ. ಆಂದೋಲನದ ಪ್ರಚಾರಕ ಅನಿಲ್ ಶೆಟ್ಟಿ, ‘ನಮ್ಮ ಅಭಿಯಾನ ಸರ್ಕಾರದ ವಿರುದ್ಧವಲ್ಲ. ಶಿಕ್ಷಣವು ಬಡತನ ನಿರ್ಮೂಲನೆ ಮಾಡುವ ಸಾಧನ. ಆದ್ದರಿಂದ ಸರ್ಕಾರ 12ನೇ ತರಗತಿಯವರೆಗೂ ಉಚಿತ ಶಿಕ್ಷಣ ನೀಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಸ್ಥಾನಗಳಿಗೆ ಏರಿದವರು, ಕಲಿತ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದರು.

ಆಂದೋಲನದ ಮತ್ತೊಬ್ಬ ಮುಖಂಡ ಪ್ರಕಾಶ್‌ ಅಂಚನ್‌, ‘ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ ಶಾಲೆಗಳ ಉಳಿವಿಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಿ, ಮುಂದಿನ ದಿನಗಳಲ್ಲಿ ಶಿಕ್ಷಣ ಯಾತ್ರೆ ಕೈಗೊಳ್ಳುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !