ಏ.21ರಂದು ರಾಜ್ಯ ಮಟ್ಟದ ನಾಟಕ ಸ್ಪರ್ಧೆ

ಶನಿವಾರ, ಮಾರ್ಚ್ 23, 2019
24 °C

ಏ.21ರಂದು ರಾಜ್ಯ ಮಟ್ಟದ ನಾಟಕ ಸ್ಪರ್ಧೆ

Published:
Updated:

ಬೆಂಗಳೂರು: ಕಾರ್ಮೆಲ್‌ ಮಾತೆಯ ಚರ್ಚ್‌ ವತಿಯಿಂದ ಏಪ್ರಿಲ್‌ 21ರಂದು ತಟ್ಟಗುಪ್ಪೆಯಲ್ಲಿ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧರ್ಮಗುರು ಎ.ಥಾಮಸ್‌, ‘ನಾಟಕ ತಂಡಗಳಿಗೆ ಪ್ರೋತ್ಸಾಹ ನೀಡಲು ರಾಜ್ಯ ಮಟ್ಟದ ನಾಟಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ವಿಜೇತ ತಂಡಕ್ಕೆ ₹50 ಸಾವಿರ ಮತ್ತು ಫಲಕ ಹಾಗೂ ಎರಡನೇ ಸ್ಥಾನ ಪಡೆಯುವ ತಂಡಕ್ಕೆ ₹40 ಸಾವಿರ ಮತ್ತು ಫಲಕವನ್ನು ಬಹುಮಾನವಾಗಿ ನೀಡಲಾಗುವುದು’ ಎಂದರು.

‘ನಾಟಕ ತಂಡಗಳು ₹1,000 ನೀಡಿ ಇದೇ 30ರ ಒಳಗೆ ನೋಂದಣಿ ಮಾಡಿಸಿಕೊಳ್ಳಬಹುದು. ತಟ್ಟಗುಪ್ಪೆಯ ಕಾರ್ಮೆಲ್‌ ಮಾತೆಯ ಚರ್ಚ್‌, ರವೀಂದ್ರ ಕಲಾಕ್ಷೇತ್ರದ ಹತ್ತಿರ ಇರುವ ಕ್ಯಾಂಟೀನ್‌, ಟೌನ್‌ ಹಾಲ್‌ ಕ್ಯಾಂಟಿನ್‌ ಮತ್ತು ಬೇಗೂರಿನ ವಾಸು ಎಂಬುವರರಲ್ಲಿ ನೋಂದಣಿ ಅರ್ಜಿ ದೊರೆಯುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !