ರಾಜ್ಯ ಮಟ್ಟದ ಅಂಚೆ- ಕುಂಚ ಸ್ಪರ್ಧೆ

7

ರಾಜ್ಯ ಮಟ್ಟದ ಅಂಚೆ- ಕುಂಚ ಸ್ಪರ್ಧೆ

Published:
Updated:

ಉಜಿರೆ: ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ಆಯೋಜಿ
ಸಲಾಗಿದೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಐ.ಶಶಿಕಾಂತ ಜೈನ್ ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯ ವಿಷಯ: ಮಹಾತ್ಮ ಗಾಂಧೀಜಿ.

ಪೆನ್ಸಿಲ್ ಅಥವಾ ಇಂಡಿಯನ್ ಇಂಕ್ ಬಳಸಿ ಚಿತ್ರಗಳನ್ನು ರಚಿಸಬೇಕು. ಸ್ಪರ್ಧೆಯ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಸಂಸ್ಥೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ಡಿಸೆಂಬರ್ 30ರೊಳಗೆ ನಿರ್ದೇಶಕರು, ಯೊಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ, ಧರ್ಮಸ್ಥಳ - 574 216 ಇಲ್ಲಿಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !