ಶುಕ್ರವಾರ, ನವೆಂಬರ್ 22, 2019
26 °C
ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಬೇರೆ ಬೇರೆ ಇಲಾಖೆಗಳಿಂದ ಮುಖ್ಯಮಂತ್ರಿ ಸಚಿವಾಲಯಕ್ಕೆ ನಿಯೋಜನೆ ಮೇಲೆ ಬಂದಿದ್ದ 21 ಅಧಿಕಾರಿ ಮತ್ತು ನೌಕರರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಸಿ.ಎಂ ಸಚಿವಾಲಯದಿಂದ 21 ಸಿಬ್ಬಂದಿ ಎತ್ತಂಗಡಿ

Published:
Updated:

ಬೆಂಗಳೂರು: ಎಚ್‌.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಬೇರೆ ಬೇರೆ ಇಲಾಖೆಗಳಿಂದ ಮುಖ್ಯಮಂತ್ರಿ ಸಚಿವಾಲಯಕ್ಕೆ ನಿಯೋಜನೆ ಮೇಲೆ ಬಂದಿದ್ದ 21 ಅಧಿಕಾರಿ ಮತ್ತು ನೌಕರರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಮುಖ್ಯಮಂತ್ರಿ ಸಚಿವಾಲಯದ ‘ಕಡತ ವಿಲೇವಾರಿ’ಯಲ್ಲಿ ಈ ಸಿಬ್ಬಂದಿ ಪ್ರಮುಖ ‘ಪಾತ್ರ’ವಹಿಸುತ್ತಾರೆ. ಜೆಡಿಎಸ್‌ ನೇತೃತ್ವದ ಸರ್ಕಾರ ಹೋಗಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಬರುತ್ತಿದ್ದಂತೆ ತಮಗೆ ಬೇಕಾದ ಸಿಬ್ಬಂದಿ ನಿಯೋಜಿಸಿಕೊಳ್ಳುವ ಸಲುವಾಗಿ ಇವರನ್ನೆಲ್ಲ ಮಾತೃ ಇಲಾಖೆಗೆ ವಾಪಸ್ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಎತ್ತಂಗಡಿಯಾದವರು: ಶಿವಶಂಕರ ನಾಯ್ಕ– ಅಧೀನ ಕಾರ್ಯದರ್ಶಿ, ರಾಜೇಶ್‌ ಸೂಳಿಕೇರಿ ಮತ್ತು ಹರೀಶ್‌–ಶಾಖಾಧಿಕಾರಿಗಳು. ಸರಸ್ವತಿ ಎನ್‌, ಎಂ.ಎಸ್‌.ಪ್ರಕಾಶ್‌, ಎಸ್‌.ಆರ್‌.ಅಭಿನಂದನ್‌, ಎಸ್‌.ಆರ್‌.ಶಿಲ್ಪಾ ಮತ್ತು ರಮೇಶ್‌ ಆರ್‌.ಕೆ– ಎಲ್ಲರೂ ಹಿರಿಯ ಸಹಾಯಕರು.

ಎಚ್‌.ಎಸ್.ಚಂದ್ರೋಜಿರಾವ್‌, ಸಿ.ಎನ್‌.ಮರಿಲಿಂಗಯ್ಯ, ವೈರಮುಡಿ ಮತ್ತು ಜಿ.ಪಿ.ರಮೇಶ್‌– ಎಲ್ಲರೂ ಸಹಾಯ
ಕರು, ಎಸ್‌.ವೈ.ಗಣೇಶ್‌ ದರ್ಶನ್‌–ಶೀಘ್ರ ಲಿಪಿಗಾರ, ಲಕ್ಷ್ಮಯ್ಯ– ಕಿರಿಯ ಸಹಾಯಕ, ರಾಜೇಗೌಡ–ಜಮೇದಾರ್, ಲಕ್ಷ್ಮೀನರಸಿಂಹಯ್ಯ, ಆರ್‌.ನಾಗೇಶ್‌, ಎಂ.ನಾರಾಯಣ, ಜಗದೀಶ್‌ ಎನ್‌., ಕೆ.ರಾಜ ಮತ್ತು ಮಂಜುನಾಥ್‌– ಎಲ್ಲರೂ ದಲಾಯತ್‌.

ಪ್ರತಿಕ್ರಿಯಿಸಿ (+)