ಮಾಧ್ಯಮ ಸ್ವಾತಂತ್ರ್ಯ: ಕೃಷ್ಣ– ಕುಮಾರಸ್ವಾಮಿ ಸಮರ

ಬುಧವಾರ, ಜೂನ್ 19, 2019
22 °C

ಮಾಧ್ಯಮ ಸ್ವಾತಂತ್ರ್ಯ: ಕೃಷ್ಣ– ಕುಮಾರಸ್ವಾಮಿ ಸಮರ

Published:
Updated:

ಬೆಂಗಳೂರು: ಮಾಧ್ಯಮ ಸ್ವಾತಂತ್ರ್ಯದ ಮೇಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗದಾಪ್ರಹಾರ ನಡೆಸಿದ್ದಾರೆ ಎಂಬ ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಹೇಳಿಕೆಗೆ, ಮುಖ್ಯಮಂತ್ರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜೆಡಿಎಸ್ ಸಭೆಯಲ್ಲಿ ಟಿ.ವಿ ವಾಹಿನಿ
ಯೊಂದನ್ನು ಕುಮಾರಸ್ವಾಮಿ ಟೀಕಿಸಿದ್ದರು. ಅದರ ಸಂಪಾದಕರಿಗೆ ಪಂಥಾಹ್ವಾನ ನೀಡಿದ್ದರು. ಇದರ ವಿರುದ್ಧ ಕೃಷ್ಣ ಭಾನುವಾರ ಪತ್ರ ಬರೆದಿದ್ದರು.

‘ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ನೀಡಿರುವ ಹೇಳಿಕೆಯನ್ನು ಗೌರವಿಸುತ್ತೇನೆ. ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರಕ್ಕೆ ಅವಕಾಶವಿಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬ ವಿಚಾರವನ್ನು ಕೃಷ್ಣ ಅವರು ಸಂಬಂಧಿಸಿದ ಪತ್ರಕರ್ತರ ಗಮನಕ್ಕೆ ತರಲಿ’ ಎಂದಿದ್ದಾರೆ.

‘ದುರುದ್ದೇಶಪೂರಿತ ತೇಜೋವಧೆ ಮಾಡುವ ಅಧಿಕಾರವನ್ನು ಸಂವಿಧಾನ ಮಾಧ್ಯಮಗಳಿಗೆ ನೀಡಿಲ್ಲ. ಸರ್ಕಾರದ ಅಥವಾ ನನ್ನ ನಡವಳಿಕೆ ಬಗ್ಗೆ ರಚನಾತ್ಮಕ ಟೀಕೆ ಮಾಡಿದರೆ ಸ್ವೀಕರಿಸುತ್ತೇನೆ’ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !