ಪೊಲೀಸ್‌ ಠಾಣೆ ಸೆಟಲ್‌ಮೆಂಟ್‌ ಅಡ್ಡೆಗಳಾಗಿವೆ: ಹೈಕೋರ್ಟ್‌ ಅಸಮಾಧಾನ

7

ಪೊಲೀಸ್‌ ಠಾಣೆ ಸೆಟಲ್‌ಮೆಂಟ್‌ ಅಡ್ಡೆಗಳಾಗಿವೆ: ಹೈಕೋರ್ಟ್‌ ಅಸಮಾಧಾನ

Published:
Updated:

ಬೆಂಗಳೂರು: ‘ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಸೆಟಲ್‌ಮೆಂಟ್‌ ಅಡ್ಡೆಗಳಾಗಿವೆ’ ಎಂದು ಹೈಕೋರ್ಟ್‌ ಸೋಮವಾರ ಕಿಡಿಕಾರಿದೆ.

ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಉದ್ಯಮಿ ಡಿ.ವೆಂಕಟೇಶ್‌ ಗುಪ್ತ ಹಾಗೂ ಶ್ರೀಹರಿ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಎಫ್ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿದ ಪ್ರಕರಣದಲ್ಲಿ, ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಪೊಲೀಸರ ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ‘ಮರ್ಯಾದೆಯಿಂದ ಬದುಕುತ್ತಿರುವ ಸಾರ್ವಜನಿಕರನ್ನು ಠಾಣೆಗೆ ಕರೆಸುವ ಪೊಲೀಸರು, ಅವರ ಮಾನ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಡವಳಿಕೆಯನ್ನು ಕೋರ್ಟ್ ಎಂದಿಗೂ ಸಹಿಸುವುದಿಲ್ಲ‘ ಎಂದರು.

‘ಅಪರಾಧ ಕೃತ್ಯ ನಡೆದಿದೆಯೊ ಇಲ್ಲವೊ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಳ್ಳಬೇಕು. ಸುಖಾಸುಮ್ಮನೆ ಸಾರ್ವಜನಿಕರನ್ನು ಠಾಣೆಗೆ ಕರೆಸಿ ಟೀಕೆ ಮಾಡಿ ಎಫ್‌ಐಆರ್‌ ದಾಖಲಿಸುವುದು ತರವಲ್ಲ. ಪೊಲೀಸರ ಈ ಪ್ರವೃತ್ತಿ ಕೊನೆಯಾಗಬೇಕು‘ ಎಂದು ಹೇಳಿದರು.

‘ಕಾನೂನು ಅರಿವು ಇರುವವರಿಗೇ ಕಾನೂನಿನ ಪಾಠ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸಂಜ್ಞೇಯ ಅಪರಾಧ ಅಲ್ಲದಿದ್ದರೂ ಪೊಲೀಸರು ಎಫ್ಐಆರ್‌ ದಾಖಲಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ಮುಂದಿನ ವಿಚಾರಣೆ ವೇಳೆ ದಕ್ಷಿಣ ವಿಭಾಗದ ಡಿಸಿಪಿ ಕೋರ್ಟ್‌ಗೆ ಖುದ್ದು ಹಾಜರಾಗಬೇಕು’ ಎಂದು ಆದೇಶಿಸಿದೆ.

ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !