ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಜಟಿಲ

6
ಥಾಯ್ಲೆಂಡ್‌: ಗುಹೆಯಲ್ಲಿ ಸಿಲುಕಿರುವ ಬಾಲಕರು

ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಜಟಿಲ

Published:
Updated:

ಮಾಸೈ: ಥಾಯ್ಲೆಂಡ್‌ನ ಥಾಮ್ ಲುವಾಂಗ್ ಗುಹೆ ಒಳಗೆ ಸಿಲುಕಿಕೊಂಡಿರುವ ಫುಟ್‌ಬಾಲ್‌ ತಂಡದ ರಕ್ಷಣೆ ಮತ್ತಷ್ಟು ಜಟಿಲವಾಗಿದೆ.

‘ಬಾಲಕರನ್ನು ಗುಹೆಯಿಂದ ಹೊರಗೆ ಕರೆತರಲು ಸಮಯಾವಕಾಶ ಬಹಳ ಕಡಿಮೆ ಇದೆ’ ಎಂದು ಥಾಯ್ಲೆಂಡ್‌ ನೌಕಾ
ಪಡೆಯ ಕಮಾಂಡರ್‌ ಅಪಕೊರ್ನ್ ತಿಳಿಸಿದ್ದಾರೆ.

’ಮಕ್ಕಳು ಬಹಳ ದಿನಗಳವರೆಗೆ ಗುಹೆಯಲ್ಲಿರುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ’ ಎಂದು ತಿಳಿಸಿದ್ದಾರೆ.

ಕಮಾಂಡರ್‌ ಅವರ ಹೇಳಿಕೆಯಿಂದ ಬಾಲಕರ ಸುರಕ್ಷತೆಯ ಬಗ್ಗೆ ಅನುಮಾನಗಳು ದಟ್ಟವಾಗತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಳುಗು ತಜ್ಞ ಸಾವು: ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸೇನೆಯ ಮಾಜಿ ಮುಳುಗು ತಜ್ಞ ಆಮ್ಲಜನಕದ ಕೊರತೆಯಿಂದ ಸಾವಿಗೀಡಾಗಿದ್ದಾರೆ.

ಅಂತಿಮ ಪಂದ್ಯ ವೀಕ್ಷಿಸಲು ಆಹ್ವಾನ
ಮಾಸ್ಕೊ: 
ಥಾಮ್ ಲುವಾಂಗ್ ಗುಹೆ ಒಳಗೆ ಸಿಲುಕಿಕೊಂಡಿರುವ ಫುಟ್‌ಬಾಲ್‌ ತಂಡ ಸುರಕ್ಷಿತಾಗಿ ಹೊರಬರುವ ವಿಶ್ವಾಸ ವ್ಯಕ್ತಪಡಿಸಿರುವ ಫಿಪಾ ಅಧ್ಯಕ್ಷ ಜಿಯಾನ್ನಿ ಇನ್ಫಾಂಟಿನೊ, ವಿಶ್ವಕಪ್‌ ಅಂತಿಮ ಪಂದ್ಯ ವೀಕ್ಷಿಸಲು 
ಆಹ್ವಾನಿಸಿದ್ದಾರೆ.

‘ಜುಲೈ 15ರಂದು ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯ ವೀಕ್ಷಿಸಲು ನಮ್ಮ ಅತಿಥಿಗಳಾಗಿ ಈ ಬಾಲಕರನ್ನು ಆಹ್ವಾನಿಸುತ್ತೇನೆ’ ಎಂದು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !