ಬಿಡಿಎ ನಿವೇಶನ ಹಂಚಿಕೆ: ಸಮಗ್ರ ವರದಿಗೆ ಪರಮೇಶ್ವರ ತಾಕೀತು

7
ತಾಯಿ ಮಗನಿಗೆ 13 ಬದಲಿ ನಿವೇಶನ

ಬಿಡಿಎ ನಿವೇಶನ ಹಂಚಿಕೆ: ಸಮಗ್ರ ವರದಿಗೆ ಪರಮೇಶ್ವರ ತಾಕೀತು

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ತಾಯಿ–ಮಗನಿಗೆ 13 ಬದಲಿ ನಿವೇಶನ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ಸಮಗ್ರ ವರದಿ ಸಲ್ಲಿಸಬೇಕು ಎಂದು ಬಿಡಿಎ ಆಯುಕ್ತರಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ತಾಕೀತು ಮಾಡಿದ್ದಾರೆ.

ಈ ಸಂಬಂಧ ಆಯುಕ್ತ ರಾಕೇಶ್‌ ಸಿಂಗ್‌ ಅವರಿಗೆ ಸಚಿವರ ಕಚೇರಿಯಿಂದ ಶುಕ್ರವಾರ ನಿರ್ದೇಶನ ಬಂದಿದೆ. ₹10.24 ಕೋಟಿ ನಿವೇಶನ ಮೊತ್ತ ಪಾವತಿಸಿಕೊಳ್ಳದೆಯೇ ತಾಯಿ ಮತ್ತು ಮಗನಿಗೆ 13 ಬದಲಿ ನಿವೇಶನಗಳನ್ನು ಪ್ರಾಧಿಕಾರ ಹಂಚಿಕೆ ಮಾಡಿತ್ತು. ಬಿಡಿಎ ನೌಕರ ವೆಂಕಟರಮಣಪ್ಪ, ನಿವೃತ್ತ ನೌಕರ ಕೆ.ರಾಜೇಂದ್ರ ಕುಮಾರ್‌, ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ಇದೇ 22ರಂದು ಎಫ್‌ಐಆರ್‌ ದಾಖಲಾಗಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಇದೇ 24ರಂದು ವರದಿ ಪ್ರಕಟವಾಗಿತ್ತು.

‘ಎಫ್‌ಐಆರ್‌ ದಾಖಲಾಗಿ ವಾರ ಕಳೆದರೂ ಹಗರಣದಲ್ಲಿ ಭಾಗಿಯಾದ ನೌಕರರನ್ನು ಅಮಾನತು ಮಾಡಿಲ್ಲ. ಹಿರಿಯ ಅಧಿಕಾರಿಗಳೇ ಭ್ರಷ್ಟಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ’ ಎಂದು ಪ್ರಾಧಿಕಾರದ ಕೆಲವು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !