ಭಾರಿ ಮಳೆ, ಪ್ರವಾಹ: ಕೇರಳಕ್ಕೆ ನೆರವಿನ ಹಸ್ತ ಚಾಚಿದ ಸಿಎಂ ಕುಮಾರಸ್ವಾಮಿ

7

ಭಾರಿ ಮಳೆ, ಪ್ರವಾಹ: ಕೇರಳಕ್ಕೆ ನೆರವಿನ ಹಸ್ತ ಚಾಚಿದ ಸಿಎಂ ಕುಮಾರಸ್ವಾಮಿ

Published:
Updated:

ಬೆಂಗಳೂರು: ಕೇರಳದಲ್ಲಿ ಧಾರಾಕಾರ ಮಳೆಗೆ ಪ್ರವಾಹ ಉಂಟಾಗಿ, ವ್ಯಾಪಕ ಹಾನಿಯಾಗಿದೆ. ಭೂ ಕುಸಿತ ಮತ್ತು ಪ್ರವಾಹ ಸಂಕಷ್ಟದಲ್ಲಿ ಸಿಲುಕಿ 26 ಜನ ಸಾವಿಗೀಡಾಗಿದ್ದು, ಕೇರಳಕ್ಕೆ ರಾಜ್ಯ ಸರ್ಕಾರ ನೆರವಿನ ಹಸ್ತ ಚಾಚಿದೆ.

ಕೇರಳದಲ್ಲಿನ ಪ್ರವಾಹ ಸಂಷ್ಟಕ್ಕೆ ನೆರವಾಗಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ₹10 ಕೋಟಿ ಮತ್ತು ವೈದ್ಯರ ತಂಡ ಹಾಗೂ ಪರಿಹಾರ ಸಾಮಗ್ರಿಗಳನ್ನು ಅಲ್ಲಿಗೆ ಕಳುಹಿಸಿಕೊಡುವಂತೆ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅವರಿಗೆ ನಿರ್ದೇಶನ ನೀಡಿದ್ದಾರೆ ಎಂದು ಎಎನ್‌ಐ ಟ್ವಿಟ್‌ ಮಾಡಿದೆ.

ಕೇರಳದಲ್ಲಿ ನಿರಂತರ ಮಳೆಯಿಂದಾಗಿ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. 22 ಜಲಾಶಯಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ತಗ್ಗು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭೂ ಕುಸಿತ ಉಂಟಾಗಿ ಅಪಾರ ಆಸ್ತಿ ನಷ್ಟವಾಗಿದೆ. 

ಇಡುಕ್ಕಿ ಮತ್ತು ಚೆರುತೋನಿ ಜಲಾಶಯಗಳಿಂದಲೂ ನೀರನ್ನು ಹೊಡಬಿಡಲಾಗುತ್ತಿದೆ. ಇದಮಲಯಾರ್‌ ಜಲಾಶಯದಿಂದ ನೀರು ಹೊರ ಬಿಟ್ಟ ಪರಿಣಾಮ ಶಿವದೇವಾಲಯ ಮುಳುಗಡೆಯಾಗಿದೆ. ಎನ್‌ಡಿಆರ್‌ಎಫ್‌ ಸೇರಿದಂತೆ ವಿವಿಧ ರಕ್ಷಣಾ ಪಡೆಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.

ರೆಡ್‌ ಅಲರ್ಟ್‌
ಇಡುಕ್ಕಿ ಜಲಾಶಯ ಸೇರಿದಂತೆ ವಿವಿಧ ಜಲಾಶಯಗಳ ವ್ಯಾಪ್ತಿಯಲ್ಲಿ ತೀವ್ರ ಎಚ್ಚರಿಕೆ(ರೆಡ್‌ ಅಲರ್ಟ್‌) ನೀಡಲಾಗಿದೆ. ನದಿ ತೀರಗಳಿಗೆ ತೆರಳದಂತೆ ಜನರಿಗೆ ಸೂಚನೆ ನೀಡಲಾಗಿದೆ ಹಾಗೂ ತೀರದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಕೇರಳದ ಕಣ್ಣೂರಿನಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ ಎರಡು ಮನೆಗಳು ನೆಲಸಮವಾಗಿವೆ. ಈ ದೃಶ್ಯದ ವಿಡಿಯೊವನ್ನು ಎಎನ್‌ಐ ಟ್ವಿಟ್‌ ಮಾಡಿದೆ.


ಪಾಲಕ್ಕಾಡ್‌ನಲ್ಲಿ ಪ್ರವಾಹ ಸಂಕಷ್ಟದಲ್ಲಿ ಸಿಲುಕಿದ್ದ ಮಹಿಳೆಯೊಬ್ಬರನ್ನು ಯುವಕರು ರಕ್ಷಿಸಿ ಹೊತ್ತೊಯ್ದರು. ಪಿಟಿಐ ಚಿತ್ರ


ಪ್ರವಾಹದ ನೀರಿನ ಸೆಳೆತಕ್ಕೆ ರಸ್ತೆಯೊಂದು ಕೊಚ್ಚಿಹೋಗಿದೆ. ಚಿತ್ರ : ಪಿಟಿಐ

* ಇದನ್ನೂ ಓದಿ...
*  ಮತ್ತೆ ಬಿರುಸು ಪಡೆದ ಮಳೆ: ರಾಜ್ಯದ ವಿವಿಧೆಡೆ ಸಂಚಾರ ಸ್ಥಗಿತ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !