ಕಾರು ಬಾಡಿಗೆ ನೆಪದಲ್ಲಿ ₹3 ಕೋಟಿ ವಂಚನೆ

ಸೋಮವಾರ, ಮಾರ್ಚ್ 25, 2019
31 °C
40 ಜನರಿಗೆ ವಂಚನೆ ಮಾಡಿದ ಆರೋಪ

ಕಾರು ಬಾಡಿಗೆ ನೆಪದಲ್ಲಿ ₹3 ಕೋಟಿ ವಂಚನೆ

Published:
Updated:
Prajavani

ಬೆಂಗಳೂರು: ಕಾರು ಬಾಡಿಗೆ ನೆಪದಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಡಿ ಬಸವನಗುಡಿ ಠಾಣೆ ಪೊಲೀಸರು ಬಂಧಿಸಿರುವ ಡಿ.ಎಂ. ದಿನೇಶ್ ಎಂಬಾತ, ಇದುವರೆಗೂ 40 ಜನರಿಂದ ₹ 3 ಕೋಟಿ ಪಡೆದು ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ.

‘ಬನಶಂಕರಿ 6ನೇ ಹಂತದ ಬಿಡಿಎ ಲೇಔಟ್ ನಿವಾಸಿಯಾದ ಡಿ.ಎಂ. ದಿನೇಶ್, ‘ವಿ3’ ಹೆಸರಿನ ಟ್ರಾನ್ಸ್‌ಪೋರ್ಟ್ಸ್‌ ಆ್ಯಂಡ್ ಲಾಜಿಸ್ಟಿಕ್ಸ್ ಕಂಪನಿ ನಡೆಸುತ್ತಿದ್ದ. ನಗರದ ಹಲವು ಕಂಪನಿಗಳಿಗೆ ಕಾರು ಅಟ್ಯಾಚ್ ಮಾಡುವುದಾಗಿ ಹೇಳಿ ಕಾರುಗಳ ಖರೀದಿಗಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ್ದ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದರು.

‘ದೂರುದಾರ ರಾಘವೇಂದ್ರ ಬೊಮ್ಮಯ್ಯ ಎಂಬುವರನ್ನು ಪರಿಚಯಿಸಿಕೊಂಡಿದ್ದ ದಿನೇಶ್, ‘ನಿಮ್ಮ ಹೆಸರಿನಲ್ಲಿ ಕಾರುಗಳನ್ನು ಖರೀದಿಸಿ ಕಂಪನಿಗೆ ಅಟ್ಯಾಚ್ ಮಾಡಿದರೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಬರುತ್ತದೆ’ ಎಂದು ನಂಬಿಸಿದ್ದ. 9 ಇನ್ನೋವಾ ಕ್ರಿಸ್ಟಾ ಕಾರುಗಳ ಖರೀದಿಗೆ ಹಾಗೂ ಇತರೆ ಖರ್ಚಿಗಾಗಿ ಅವರಿಂದ ₹50 ಲಕ್ಷ ಪಡೆದಿದ್ದ’.

‘ತಲಾ ಒಂದು ಕಾರಿಗೆ ₹15,000 (ತಿಂಗಳಿಗೆ) ಬಾಡಿಗೆಯನ್ನೂ ಕೆಲವು ತಿಂಗಳು ಕೊಟ್ಟು, ನಂತರ ನಿಲ್ಲಿಸಿದ್ದ. ಆ ಬಗ್ಗೆ ವಿಚಾರಿಸಿದಾಗ, ‘ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆಯೊಡ್ಡಿದ್ದ. ಆ ಸಂಬಂಧ ರಾಘವೇಂದ್ರ ನೀಡಿದ್ದ ದೂರಿನಡಿ ಆತನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು’ ಎಂದು ಅಣ್ಣಾಮಲೈ ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !