₹30 ಲಕ್ಷ ಮೊತ್ತದ ಚಿನ್ನಾಭರಣ ಕಳವು

ಶನಿವಾರ, ಮಾರ್ಚ್ 23, 2019
24 °C

₹30 ಲಕ್ಷ ಮೊತ್ತದ ಚಿನ್ನಾಭರಣ ಕಳವು

Published:
Updated:

ಬೆಂಗಳೂರು: ಸದಾಶಿವನಗರ ಬಳಿಯ ಆರ್‌.ಎಂ.ವಿ ಎಕ್ಸ್‌ಟೆನ್ಶನ್ 9ನೇ ಮುಖ್ಯರಸ್ತೆಯಲ್ಲಿರುವ ಉದ್ಯಮಿ ರಾಜೀವ್ ಗೋಯೆಂಕಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಆ ಸಂಬಂಧ ಸದಾಶಿವನಗರ ಠಾಣೆಗೆ ದೂರು ನೀಡಿರುವ ರಾಜೀವ್, ‘ಮಾ. 11ರಂದು ತಡರಾತ್ರಿ ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ₹ 1 ಲಕ್ಷ ನಗದು ಹಾಗೂ ₹ 30 ಲಕ್ಷ ಮೊತ್ತದ ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿದ್ದಾರೆ’ ಎಂದು ತಿಳಿಸಿದ್ದಾರೆ.

‘ರಾತ್ರಿ ನಿದ್ದೆಗೆ ಜಾರಿದ್ದ ನಾನು, ಮಾ. 12ರಂದು ಬೆಳಿಗ್ಗೆ 5.30ರ ಸುಮಾರಿಗೆ ಎದ್ದು ನೋಡಿದಾಗಲೇ ಕಳ್ಳತನದ ಕೃತ್ಯ ಗಮನಕ್ಕೆ ಬಂದಿದೆ. ಮೊಬೈಲ್, ಲ್ಯಾಪ್‌ಟಾಪ್‌ ಸಹ ಕಳುವಾಗಿವೆ’ ಎಂದು ದೂರಿನಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !