ಬೆಳ್ಳಂದೂರಿಗೆ ಸಿಕ್ಕಿತು ₹25 ಕೋಟಿ

7

ಬೆಳ್ಳಂದೂರಿಗೆ ಸಿಕ್ಕಿತು ₹25 ಕೋಟಿ

Published:
Updated:
Deccan Herald

ಬೆಂಗಳೂರು: ಬೆಳ್ಳಂದೂರು ವಾರ್ಡ್‌ನ 30ಕ್ಕೂ ಹೆಚ್ಚು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳ ಒತ್ತಾಯಕ್ಕೆ ಮಣಿದಿರುವ ಮೇಯರ್‌ ಸಂಪತ್‌ ರಾಜ್‌, ಈ ಭಾಗದಲ್ಲಿ ₹25 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದರು.

ಸಂಘಟನೆಗಳ ಸದಸ್ಯರೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಈ ಬಗ್ಗೆ ತಿಳಿಸಿದ ಮೇಯರ್‌, ‘ಇನ್ನೊಂದು ವಾರದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಮಹದೇವಪುರ ವಲಯದಲ್ಲಿ ಬೀದಿ ದೀಪಗಳನ್ನು ಅಳವಡಿಸಲು ₹4.5 ಕೋಟಿ, ಬೆಳ್ಳಂದೂರು ಭಾಗದಲ್ಲಿನ ರಸ್ತೆ ಪಕ್ಕದ ತೆರದ ಚರಂಡಿಗಳ ನಿರ್ಮಾಣಕ್ಕಾಗಿ ₹9.5 ಕೋಟಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಾಗಿ ₹ 11 ಕೋಟಿ ನೀಡುವುದಾಗಿ ಸಭೆಯಲ್ಲಿ ತಿಳಿಸಿದರು.

ದೊಡ್ಡಕನ್ನಳ್ಳಿ, ಕೈಕೊಂಡ್ರಹಳ್ಳಿ, ಕಸವನಹಳ್ಳಿ, ಬೆಳ್ಳಂದೂರು, ಯಮಲೂರು ಭಾಗದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆ ಸದಸ್ಯರು ಹಾಗೂ ಈ ಭಾಗದಲ್ಲಿರುವ ವಿಪ್ರೊ ಕಂಪನಿ ಪ್ರತಿನಿಧಿಗಳು ಸಭೆಯಲ್ಲಿದ್ದರು. ಇದೇ ವೇಳೆ ಬೆಳ್ಳಂದೂರು ಅಭಿವೃದ್ಧಿ ನಿರ್ಣಯಗಳನ್ನು ಮೇಯರ್‌ಗೆ ಸಲ್ಲಿಸಿದರು.

ಇದರ ಜೊತೆಗೆ ಮೂರು ತಿಂಗಳಿಂದ ಬಾಕಿ ಉಳಿದಿದ್ದ ಸಣ್ಣ ಪುಟ್ಟ ಕಾಮಗಾರಿಗಳಿಗೆ ₹3 ಕೋಟಿ ಮಂಜೂರು ಮಾಡಿದರು. ಮುಂದಿನ 10 ದಿನದೊಳಗೆ ಟೆಂಡರ್‌ ಕರೆದು ಕೆಲಸ ಪ್ರಾರಂಭಿಸುವುದು. 30 ದಿನದೊಳಗೆ ಎರಡು ಹಂತಗಳಲ್ಲಿ ಹಣ ಬಿಡುಗಡೆ ಮಾಡುತ್ತೇವೆ’ ಎಂದು ಸಂಪತ್‌ ರಾಜ್‌ ಭರವಸೆ ನೀಡಿದರು.

‘61 ಕಿ.ಮೀ ಉದ್ದದ ಮುಖ್ಯರಸ್ತೆಯ ಪುನಶ್ಚೇತನ ಕಾಮಗಾರಿ ಇನ್ನೂ ಬಾಕಿ ಇದ್ದು, ಶೀಘ್ರದಲ್ಲಿ ಮಾಡಬೇಕು ಹಾಗೂ ಈ ಭಾಗಕ್ಕೆ ಮೂರನೇ ಹಂತದಲ್ಲಿದೆ ಮೆಟ್ರೊ ಬರುತ್ತದೆ. ಅದನ್ನು ಎರಡನೇ ಹಂತದಲ್ಲಿಯೇ ನಿರ್ಮಿಸಬೇಕು ಎಂದು ಮನವಿ ನೀಡಿದ್ದೇವೆ’ ಎಂದು ಕಸವನಹಳ್ಳಿ ಡೆವೆಲಪ್‌ಮೆಂಟ್‌ ಫೋರಂ ಅಧ್ಯಕ್ಷ ವಿಷ್ಣುಪ್ರಸಾದ್‌ ಹರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಎಲ್ಲಾ ಭರವಸೆಗಳು ಕಾರ್ಯರೂಪಕ್ಕೆ ಬಂದ ನಂತರವೇ ನಮ್ಮ ಶ್ರಮ ಸಾರ್ಥಕವಾಯಿತು ಎಂದು ಕೊಳ್ಳಬಹುದು. ₹25 ಕೋಟಿ ವೆಚ್ಚದ ಕಾಮಗಾರಿಗೆ ಒಪ್ಪಿಗೆ ಸಿಕ್ಕಿರುವುದು ನಮ್ಮ ಗೆಲುವು’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !