ಸಿಂಗಪುರ ಉದ್ಯಮಿಯ ಬ್ಯಾಗ್ ಕಳವು

7

ಸಿಂಗಪುರ ಉದ್ಯಮಿಯ ಬ್ಯಾಗ್ ಕಳವು

Published:
Updated:

ಬೆಂಗಳೂರು: ಎಂ.ಜಿ.ರಸ್ತೆಯ ಪ್ರೆಸ್ಟೀಜ್ ಮೆರಿಡಿಯನ್ ಹೋಟೆಲ್ ಬಳಿ ನಿಲ್ಲಿಸಲಾಗಿದ್ದ ಕಾರಿನಲ್ಲಿದ್ದ ಬ್ಯಾಗನ್ನು ಕಳವು ಮಾಡಲಾಗಿದೆ.

ಈ ಸಂಬಂಧ ಸಿಂಗಪುರದ ಉದ್ಯಮಿ ಲಿಮ್ ಚೀ ವಾಂಗ್, ಅಶೋಕನಗರ ಠಾಣೆಗೆ ದೂರು ನೀಡಿದ್ದಾರೆ. 

‘ಮಾಕಿನೊ ಏಷ್ಯಾ ‍ಕಂಪ‍ನಿ ನಡೆಸುತ್ತಿರುವ ವಾಂಗ್, ಎಂ.ಜಿ.ರಸ್ತೆಯಲ್ಲಿ ಹೊಸ ಕಚೇರಿ ಆರಂಭಿಸಲು ಯೋಚಿಸಿದ್ದರು. ಜಾಗ ನೋಡಲೆಂದು ಸ್ನೇಹಿತ ಹಂಗ್ ಹುಕ್ ಶಿಯಾಂಗ್ ಹಾಗೂ ಕಂಪನಿಯ ಪ್ರತಿನಿಧಿ ಮಂಜುನಾಥ್ ಜತೆ ಆಗಸ್ಟ್ 8ರಂದು ಎಂ.ಜಿ.ರಸ್ತೆಗೆ ಕಾರಿನಲ್ಲಿ ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಹೋಟೆಲ್ ಬಳಿ ಕಾರು ನಿಲ್ಲಿಸಿ, ಹತ್ತಿರದಲ್ಲೇ ಇದ್ದ ಕಟ್ಟಡವೊಂದನ್ನು ನೋಡಲು ಹೋಗಿದ್ದರು. ವಾಪಸ್‌ ಬರುವಷ್ಟರಲ್ಲೇ ಬ್ಯಾಗ್‌ ಕಳುವಾಗಿದೆ. ಲ್ಯಾಪ್‌ಟಾಪ್, ಮೊಬೈಲ್, ಪರ್ಸ್‌, ಪಾಸ್‌ಪೋರ್ಟ್, ಚಾಲನಾ ಪರವಾನಗಿ ಪತ್ರ ಹಾಗೂ ಗುರುತಿನ ಚೀಟಿಗಳು ಬ್ಯಾಗ್‌ನಲ್ಲಿದ್ದವೆಂದು ವಾಂಗ್‌ ದೂರಿನಲ್ಲಿ ತಿಳಿಸಿದ್ದಾರೆ’ ಎಂದರು.

‘ಘಟನೆ ಬಗ್ಗೆ ಕಾರು ಚಾಲಕ ಭಾಸ್ಕರ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ‘ನಾನು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ. ಅವಾಗಲೇ ಈ ಘಟನೆ ನಡೆದಿದೆ’ ಎಂದು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !