22 ಸಿಎನ್‌ಜಿ ಸ್ಟೇಷನ್‌ಗಳ ನಿರ್ಮಾಣ

ಗುರುವಾರ , ಏಪ್ರಿಲ್ 25, 2019
31 °C

22 ಸಿಎನ್‌ಜಿ ಸ್ಟೇಷನ್‌ಗಳ ನಿರ್ಮಾಣ

Published:
Updated:

ಬೆಂಗಳೂರು: ಗ್ಯಾಸ್‌ ಇಂಡಿಯಾ ಲಿಮಿಟೆಡ್‌ (ಗೇಲ್‌) ಸಂಸ್ಥೆಯ ವತಿಯಿಂದ ನಗರದ 22 ಕಡೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ತುಂಬುವ ಸ್ಟೇಷನ್‌ಗಳನ್ನು ಆರಂಭಿಸಲಾಗುತ್ತಿದೆ. ಈಗಾಗಲೇ 12 ಸ್ಟೇಷನ್‌ಗಳು ಕಾರ್ಯಾರಂಭ ಮಾಡಿದರೆ, 8 ಸ್ಟೇಷನ್‌ಗಳು ಕಾರ್ಯಾರಂಭ ಮಾಡುವ ಹಂತದಲ್ಲಿವೆ. ಉಳಿದೆರಡು ಸ್ಟೇಷನ್‌ಗಳ ನಿರ್ಮಾಣ ಕಾರ್ಯ ನಡೆದಿದೆ.

ನಗರದಲ್ಲಿ ಸದ್ಯ ಸಾವಿರಕ್ಕೂ ಅಧಿಕ ಸಿಎನ್‌ಜಿ ಬಳಕೆಯ ವಾಹನಗಳು ಸಂಚರಿಸುತ್ತಿವೆ. ಈ ನೈಸರ್ಗಿಕ ಅನಿಲದ ಬಳಕೆಯನ್ನು ಉತ್ತೇಜಿಸಲು ಉಬರ್‌ ಸಂಸ್ಥೆಯ ಜೊತೆ ಗೇಲ್‌ ಸಹಭಾಗಿತ್ವವನ್ನೂ ಹೊಂದಿದೆ. ಬಳಕೆದಾರರು ಮ್ಯಾಪ್‌ ಮುಖಾಂತರ ತಮಗೆ ಹತ್ತಿರವಾದ ಸಿಎನ್‌ಜಿ ಸ್ಟೇಷನ್‌ಗೆ ಸುಲಭವಾಗಿ ತಲುಪಬಹುದು. 

ಈ ವರ್ಷದಲ್ಲಿ 25 ಸ್ಟೇಷನ್‌ಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ದೆಹಲಿ, ಮುಂಬೈ, ಪುಣೆ, ಹೈದರಾಬಾದ್‌, ಇಂದೋರ್‌, ಆಗ್ರಾ ನಗರಗಳಲ್ಲೂ ಸಿಎನ್‌ಜಿ ಪೂರೈಕೆ ಸ್ಟೇಷನ್‌ಗಳ ನಿರ್ಮಾಣಕ್ಕೆ ಗೇಲ್‌ ಚಿಂತಿಸಿದೆ.

ಎಲ್ಲೆಲ್ಲಿ ಸಿಎನ್‌ಜಿ ಸ್ಟೇಷನ್?: ಜಿಗಣಿ, ಲಗ್ಗೆರೆ, ಹಾರ್ಡ್‌ವೇರ್‌ ಪಾರ್ಕ್‌, ಪೀಣ್ಯ, ಸುಂಕದಕಟ್ಟೆ, ಬೊಮ್ಮಸಂದ್ರ, ಅಗರ, ಟಾಟಾನಗರಗಳಲ್ಲಿ ಈಗಾಗಲೇ ಸ್ಟೇಷನ್‌ಗಳು ಕಾರ್ಯಾರಂಭ ಮಾಡಿವೆ. ಕೆ.ಆರ್‌.ಪುರ, ಗೊರವಿಗೆರೆ, ಸರ್ಜಾಪುರ ರಸ್ತೆ, ಕಟ್ಟಿಗಾನಹಳ್ಳಿ, ಆನೇಕಲ್‌, ದೊಡ್ಡಬಳ್ಳಾಪುರ ರಸ್ತೆ, ವಿರೂಪಾಕ್ಷಪುರ, ಬನಶಂಕರಿ, ಮಾಗಡಿ ರಸ್ತೆ, ಬನ್ನೇರುಘಟ್ಟದಲ್ಲಿ ಶೀಘ್ರದಲ್ಲೇ ಸಿಎನ್‌ಜಿ ಪೂರೈಕೆ ಆರಂಭವಾಗಲಿದೆ. ಗೊಲ್ಲಹಳ್ಳಿ ಹಾಗೂ ದೂರವಾಣಿನಗರ ಬಳಿ ಸ್ಟೇಷನ್‌ಗಳು ನಿರ್ಮಾಣ ಹಂತದಲ್ಲಿವೆ ಎಂದು ಗೇಲ್‌ ಅಧಿಕಾರಿಗಳು ತಿಳಿಸಿದ್ದಾರೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !