ಐಐಎಸ್‌ಸಿಗೆ ₹ 5 ಕೋಟಿ ದೇಣಿಗೆ

7

ಐಐಎಸ್‌ಸಿಗೆ ₹ 5 ಕೋಟಿ ದೇಣಿಗೆ

Published:
Updated:

ಬೆಂಗಳೂರು: ಹೈದರಾಬಾದ್‌ನ ರಸಾಯನ ವಿಜ್ಞಾನಿ ಮತ್ತು ಉದ್ಯಮಿ ಡಾ.ಎ.ವಿ.ರಾಮರಾವ್‌ ಭಾರತೀಯ ವಿಜ್ಞಾನ ಸಂಸ್ಥೆ ₹ 5 ಕೋಟಿ ದೇಣಿಗೆ ನೀಡಿದ್ದಾರೆ.

ಐಐಎಸ್‌ಸಿಯಲ್ಲಿ ನಿರ್ಮಾಣಗೊಳ್ಳುವ ರಸಾಯನ ವಿಜ್ಞಾನ ವಿಭಾಗದ ಹೊಸ ಕಟ್ಟಡದಲ್ಲಿ ರಾವ್‌ ಹೆಸರಿನಲ್ಲಿ ಅತ್ಯಾಧುನಿಕ ಸಭಾಂಗಣವನ್ನು ನಿರ್ಮಿಸಲಾಗುವುದು. ಭಾರತೀಯ ರಸಾಯನ ತಂತ್ರಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕರಾಗಿರುವ ರಾವ್‌ 1995 ರಲ್ಲಿ ಹೈದರಾಬಾದ್‌ನಲ್ಲಿ ಎವಿಆರ್‌ಎ ಪ್ರಯೋಗಾಲಯವನ್ನು ಆರಂಭಿಸಿದರು ಎಂದು ಭಾರತೀಯ ವಿಜ್ಞಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಐಐಎಸ್‌ಸಿ ನಿರ್ದೇಶಕ ಪ್ರೊ.ಅನುರಾಗ್ ಕುಮಾರ್‌ ಅವರಿಗೆ ಚೆಕ್‌ ಹಸ್ತಾಂತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !