ಗುರುವಾರ , ಮಾರ್ಚ್ 4, 2021
20 °C

ವಲಸಿಗರ ಪರ ನಟ ಚೇತನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ದೊಡ್ಡನೆಕ್ಕುಂದಿ ವಾರ್ಡ್‌ನ ತೂಬರಹಳ್ಳಿಯಲ್ಲಿ ಷೆಡ್ ನಿರ್ಮಿಸಿಕೊಂಡು ನೆಲೆಸಿರುವ ವಲಸಿಗರ ಬೆಂಬಲಕ್ಕೆ ನಟ ಚೇತನ್‌ ಮುಂದಾಗಿದ್ದಾರೆ.

ಷೆಡ್‌ನಿಂದ ನಿವಾಸಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದರು.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಚೇತನ್, ‘ನಿಮಗೆ ಯಾವುದೆ ತೊಂದರೆ ಆಗದಂತೆ ನಾವು ನಿಮ್ಮ ಜೊತೆ ಇರುತ್ತೇವೆ’ ಎಂದು ಭರವಸೆ ನೀಡಿದರು. ನಿವಾಸಿಗಳ ಹಿತರಕ್ಷಣೆ  ಬಗ್ಗೆ ಬಿಬಿಎಂಪಿ ಮೇಯರ್ ಜೊತೆ ಮಾತನಾಡುವುದಾಗಿ ತಿಳಿಸಿದರು.

ಈ ವೇಳೆ ಜನವಾದಿ ಮಹಿಳಾ ಸಂಘಟನೆಯ ಉಪಾದ್ಯಕ್ಷೆ ಗೌರಮ್ಮ, ಸಿಪಿಐಎಂ ಮುಖಂಡ ಗೋಪಾಲಗೌಡ ಅವರಿಗೆ ಸಾಥ್ ನೀಡಿದರು. ಈ ಸಂದರ್ಭ ಮಾತನಾಡಿದ ಗೌರಮ್ಮ, ‘ನಮ್ಮ ರಾಜ್ಯದ ಜನರು ಬೇರೆ ರಾಜ್ಯಗಳಲ್ಲಿ ನೆಲೆಸಿರುವಂತೆ ಇವರು ಸಹ ಉದ್ಯೋಗ ಅರಸಿ ಬಂದು ಇಲ್ಲಿ ನೆಲೆಸಿದ್ದಾರೆ. ಇವರು ನೆಲೆಸಿರುವ ಜಾಗಕ್ಕೆ ಬಾಡಿಗೆಯನ್ನೂ ನೀಡಿದ್ದಾರೆ.  ಇವರನ್ನು ಒಕ್ಕಲೆಬ್ಬಿಸಿ ಜಾಗ ಖಾಲಿ ಮಾಡಿಸುವುದರ ಹಿಂದೆ ಕೆಲ ಭೂ ಮಾಫಿಯಾದವರ ಕೈವಾಡ ಇದೆ’ ಎಂದು ಆರೋಪಿಸಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.