ಅಂಗವಿಕಲರಿಗೆ ‘ಕನೆಕ್ಟಿವಿಟಿ ಆ್ಯಪ್‌’

7

ಅಂಗವಿಕಲರಿಗೆ ‘ಕನೆಕ್ಟಿವಿಟಿ ಆ್ಯಪ್‌’

Published:
Updated:
Deccan Herald

ಬೆಂಗಳೂರು: ಅಂಗವಿಕಲರನ್ನು ಸಬಲೀಕರಣಗೊಳಿಸುವಂತಹ ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಕುರಿತು ಜಾಗೃತಿ ಮೂಡಿಸಲು ನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ‘14ನೇ ‘ಟಿ.ಇ ಕನೆಕ್ಟಿವಿಟಿ ಬೆಂಗಳೂರು ವಾಕಥಾನ್’ ಏರ್ಪಡಿಸಲಾಗಿತ್ತು.

ಸಮರ್ಥನಂ ಸಂಸ್ಥೆ ಹಾಗೂ ಟಿ.ಇ ಕನೆಕ್ಟಿವಿಟಿ ಸಂಸ್ಥೆಯು ಆಯೋಜಿಸಿದ್ದ ಈ ವಾಕಥಾನ್‌ಗೆ ಮೇಯರ್ ಗಂಗಾಂಬಿಕೆ ಚಾಲನೆ ನೀಡಿದರು. ಜಯನಗರದ 4ನೇ ಬ್ಲಾಕ್, 3ನೇ ಬ್ಲಾಕ್ ಸೌತ್ ಎಂಡ್ ರಸ್ತೆಗಳಲ್ಲಿ ಸಾಗಿದ ವಾಕಥಾನ್‌ ಮತ್ತೆ ಕ್ರೀಡಾಂಗಣಕ್ಕೆ ಬಂದು ತಲುಪಿತು.

ಅಂಗವಿಕಲರನ್ನು ಡಿಜಿಟಲ್ ಲೋಕಕ್ಕೆ ಕರೆದೊಯ್ಯುವ ಸಲುವಾಗಿ ಸಮರ್ಥನಂ ಸಂಸ್ಥೆಯು ಅವರಿಗಾಗಿ ‘ಕನೆಕ್ಟಿವಿಟಿ (ಸಂಪರ್ಕ) ಆ್ಯಪ್’ ಅನ್ನೂ ಬಿಡುಗಡೆ ಮಾಡಿತು.

‘ಅಂಗವಿಕಲರು ಆ್ಯಪ್‌ನಿಂದ ಸಮಾಜದ ಬಗ್ಗೆ ತಿಳಿಯಲು, ಶಿಕ್ಷಣ, ಜ್ಞಾನ ವೃದ್ಧಿಸಿಕೊಳ್ಳಲು, ಉದ್ಯೋಗವಕಾಶ ಸೇರಿದಂತೆ ಇತರ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಸಮಾಜದಲ್ಲಿ ಅಂಗವಿಕಲರು ಸಮಾನ ಗೌರವ ಪಡೆಯಬೇಕೆಂಬ ಉದ್ದೇಶವೂ ಆಗಿದೆ’ ಎಂದು ಮೇಯರ್‌ ತಿಳಿಸಿದರು.

ಸಂಸ್ಥೆಯ ಸಂಸ್ಥಾಪಕ ವ್ಯವಸ್ಥಾಪಕ ಟ್ರಸ್ಟಿ ಜಿ.ಕೆ.ಮಹಂತೇಶ್‌, ‘ಡಿಜಿಟಲ್ ಕ್ಷೇತ್ರ ಜನರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸಂಸ್ಥೆಯು ಐ.ಟಿ ಸಂವಹನ ಕ್ಷೇತ್ರದೊಂದಿಗೆ ಕೈಜೋಡಿಸಿ ಅಂಗವಿಕಲರಿಗೆ ಅನುಕೂಲವಾಗುವ ರೀತಿ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿಸದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !