ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ನಿಲ್ದಾಣ ಇನ್ನು ಕುವೆಂಪು ಸಾರಿಗೆ ಸಂಕೀರ್ಣ

Last Updated 4 ಫೆಬ್ರುವರಿ 2019, 19:29 IST
ಅಕ್ಷರ ಗಾತ್ರ

ಬೆಂಗಳೂರು: ವಿಜಯ ನಗರಸಾರಿಗೆಸಂಕೀರ್ಣಕ್ಕೆ (ಟಿಟಿಎಂಸಿ) ರಾಷ್ಟ್ರಕವಿಕುವೆಂಪುಸಾರಿಗೆಸಂಕೀರ್ಣ ಎಂದು ಸೋಮವಾರ ನಾಮಕರಣ ಮಾಡಲಾಯಿತು.

ಗೋವಿಂದರಾಜನಗರ ಶಾಸಕ ವಿ. ಸೋಮಣ್ಣ, ಬಿಎಂಟಿಸಿ ಅಧ್ಯಕ್ಷ, ಶಾಸಕ ಎನ್‌.ಎ. ಹ್ಯಾರಿಸ್‌, ಪಾಲಿಕೆ ಸದಸ್ಯೆ ಶಾಂತ ಕುಮಾರಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ.ಪ್ರಸಾದ್‌ ಇದ್ದರು.

ಪ್ರತಿ ನಿಲ್ದಾಣಗಳಿಗೆ ಒಬ್ಬೊಬ್ಬ ಮಹನೀಯರ ಹೆಸರಿಡುವಂತೆ ವಿವಿಧ ಸಂಘಟನೆಗಳು ಒತ್ತಾಯಿಸುತ್ತಲೇ ಬಂದಿದ್ದವು. ಅದರಲ್ಲಿ ವಿಜಯನಗರ ನಿಲ್ದಾಣಕ್ಕೆಕುವೆಂಪುಹೆಸರಿಡುವ ಕುರಿತ ಒತ್ತಡ ಹೆಚ್ಚಾಗಿತ್ತು. ಅದರಂತೆ ಕಳೆದ ವರ್ಷ ಮಾರ್ಚ್‌ 20ರಂದು ರಾಜ್ಯ ಸರ್ಕಾರಡ ಈ ಹೆಸರಿಡಲು ಸಮ್ಮತಿಸಿತ್ತು. ಚುನಾವಣೆ, ಸರ್ಕಾರಗಳ ಬದಲಾವಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಈ ಕಾರ್ಯಕ್ರಮ ಮುಂದಕ್ಕೆ ಹೋಗಿತ್ತು.

ಗಾಂಧಿಸಾರಿಗೆಬರಲಿ: ನಾಡಪ್ರಭು ಕೆಂಪೇಗೌಡ ವಿಚಾರ ವೇದಿಕೆ ಟ್ರಸ್ಟ್‌ ಕೂಡಾ ಈ ನಾಮಕರಣದ ಬಗ್ಗೆ ಒತ್ತಾಯ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಸ್ಟ್‌ ಅಧ್ಯಕ್ಷ ಪಾಪಣ್ಣ, ‘ನಗರಕ್ಕೆ ಅಟಲ್‌ಸಾರಿಗೆಬಂದ ಮಾದರಿಯಲ್ಲೇ ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಸಂಪರ್ಕ ಕಲ್ಪಿಸುವ ಗಾಂಧಿಸಾರಿಗೆಅನುಷ್ಠಾನಕ್ಕೆ ಬರಬೇಕು' ಎಂದು ಅವರು ಒತ್ತಾಯಿಸಿದರು.

ಎರಡು ಸ್ಟೇಜ್‌ಗಳ ದರ ಸಲ್ಲದು: ಇದೇ ವೇಳೆ ಕೆಲವು ಪ್ರದೇಶಗಳ ನಡುವೆ ಕಡಿಮೆ ಅಂತರ ಇದ್ದರೂ ಪ್ರತ್ಯೇಕ ಹಂತದ ದರ ಪಡೆಯಲಾಗುತ್ತಿದೆ. ಉದಾಹರಣೆಗೆ ವಿಜಯನಗರ ಮೆಟ್ರೊ ನಿಲ್ದಾಣದಿಂದ ಬಸ್‌ ನಿಲ್ದಾಣದವರೆಗೆ ಕೆಲವೇ ಹೆಜ್ಜೆಗಳಷ್ಟು ದೂರ. ಆದರೆ ಮೆಟ್ರೊ ನಿಲ್ದಾಣದವರೆಗೆ ಒಂದು ಪ್ರಯಾಣ ದರ. ಬಸ್‌ ನಿಲ್ದಾಣದವರೆಗೆ ಬಂದರೆ ಇನ್ನೊಂದು ಸ್ಟೇಜ್‌ನ ದರ ಪಡೆಯಲಾಗುತ್ತದೆ. ಇವೆರಡನ್ನೂ ಒಂದೇ ಸ್ಟೇಜ್‌ ಎಂದು ಪರಿಗಣಿಸಬೇಕು. ನಗರದ ಬೇರೆ ಬೇರೆ ಸ್ಥಳಗಳಲ್ಲಿ ಇದೇ ರೀತಿಯ ತೊಂದರೆ ಇದೆ. ಇದನ್ನು ಸರಿಪಡಿಸಬೇಕು ಎಂದು ಪಾಪಣ್ಣ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT