ಕೆಎಸ್‌ಆರ್‌ಟಿಸಿಗೆ ‘ಪಿಆರ್‌ಸಿಐ ಎಕ್ಸಲೆನ್ಸ್‌’ ಪ್ರಶಸ್ತಿ

7

ಕೆಎಸ್‌ಆರ್‌ಟಿಸಿಗೆ ‘ಪಿಆರ್‌ಸಿಐ ಎಕ್ಸಲೆನ್ಸ್‌’ ಪ್ರಶಸ್ತಿ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ ವತಿಯಿಂದ ‘ಪಿಆರ್‌ಸಿಐ ಎಕ್ಸಲೆನ್ಸ್‌’ ಪ್ರಶಸ್ತಿ ಲಭಿಸಿದೆ.

ಮೂರು ವಿಭಾಗಗಳಲ್ಲಿ ಸಂಸ್ಥೆಯ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಿಗಮದ ಆಂತರಿಕ ನಿಯತಕಾಲಿಕ ‘ಸಾರಿಗೆ ಸಂಪದ’ ಪ್ರಕಟಿಸಿರುವುದು, ಅದರ ಮೂಲಕ ಮಾಹಿತಿ ನೀಡಿರುವುದು, ‘ಅಪಘಾತ ಕುರಿತ ಸಾರ್ವಜನಿಕ ಜಾಗೃತಿ ಸಾಕ್ಷ್ಯಚಿತ್ರ’ ನಿರ್ಮಿಸಿರುವುದು – ಇಂತಹ ಉಪಕ್ರಮಗಳನ್ನು ವಿಶೇಷವಾಗಿ ಪರಿಗಣಿಸಲಾಗಿದೆ.

ಬಸ್‌ ಹಾಗೂ ತಮ್ಮ ವಾಹನಗಳ ನಡುವೆ ಸುರಕ್ಷತಾ ಅಂತರ ಕಾಪಾಡುವ ಕುರಿತ ಮಾಹಿತಿ ನೀಡುವುದು, ಚಾಲಕರಿಗೆ ಅಗೋಚರ ಪ್ರದೇಶಗಳ (ಬ್ಲೈಂಡ್ ಸ್ಪಾಟ್) ಬಗ್ಗೆ ಅರಿವು ಮೂಡಿಸುವ ಸಾಕ್ಷ್ಯಚಿತ್ರ ನಿರ್ಮಿಸಿರುವುದನ್ನು ಸಹ ಗುರುತಿಸಲಾಗಿದೆ.

‘ಸಾಧನೆಗಳ ಮೈಲಿಗಲ್ಲು’ ಹೆಸರಿನ ಕಾರ್ಪೊರೇಟ್ ಸಾಕ್ಷ್ಯಚಿತ್ರದ ಮೂಲಕ ಸಂಸ್ಥೆಯ ಚಿತ್ರಣ ಕಟ್ಟಿಕೊಟ್ಟಿರುವುದನ್ನೂ ಪ್ರಶಸ್ತಿ ಆಯ್ಕೆ ಸಮಿತಿ ಗಮನಿಸಿದೆ.

ಫೆ. 15 ಮತ್ತು 16ರಂದು ರಾಜಸ್ಥಾನದ ಜೈಪುರದಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಹಾ ಮಂಡಳಿ ಹಾಗೂ ವಿಶ್ವ ಸಂವಹನ ಮಂಡಳಿಯ 13ನೇ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್‌.ಲತಾ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !