ಎಲ್‌ಜಿಬಿಟಿ ಸಮುದಾಯದ ‘ದಿ ಪ್ರೈಡ್‍ಬುಕ್’

7

ಎಲ್‌ಜಿಬಿಟಿ ಸಮುದಾಯದ ‘ದಿ ಪ್ರೈಡ್‍ಬುಕ್’

Published:
Updated:

ಬೆಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ (ಸಲಿಂಗಿಗಳು, ದ್ವಿಲಿಂಗಿಗಳು, ಲಿಂಗಪರಿವರ್ತಿತರು) ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ‘ದಿ ಪ್ರೈಡ್‍ಬುಕ್’ ಎಂಬ ವೆಬ್‌ಸೈಟ್‌ ಲೋಕಾರ್ಪಣೆಗೊಂಡಿದೆ.  

ಸಮುದಾಯದವರೊಂದಿಗೆ ಪರಸ್ಪರ ಸಂಪರ್ಕ, ಆಪ್ತ ಸಮಾಲೋಚನೆ, ಉದ್ಯೋಗಾವಕಾಶಗಳ ಕುರಿತು ಮಾಹಿತಿ ಹಂಚಿಕೆ, ಸಂದೇಶ ರವಾನೆ, ವಿಡಿಯೊ ಚಾಟ್‌ ಇತ್ಯಾದಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ದಿ ಪ್ರೈಡ್‍ಬುಕ್ ಫೇಸ್‌ಬುಕ್‌ನಂತೆಯೇ ಕಾರ್ಯನಿರ್ವಹಿಸಲಿದೆ. 

ಟೆಕ್ನೋಡ್ ಇನ್‍ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಅನೂಪ್ ಮುರಳಿ ಮತ್ತು ಚಂದನ್ ದಾಸ್ ಅವರು ಈ ವೆಬ್‌ಸೈಟ್‌ ಅನ್ನು ರೂಪಿಸಿದ್ದು, ಸದ್ಯ ಇಂಗ್ಲಿಷ್‌ ಸೇರಿದಂತೆ 40 ಅಂತರರಾಷ್ಟ್ರೀಯ ಭಾಷೆಗಳಲ್ಲಿ ಲಭ್ಯವಿದ್ದು, ಸದ್ಯದಲ್ಲೇ ದೇಶದ ಪ್ರಮುಖ ಭಾಷೆಗಳಲ್ಲಿಯೂ ದೊರೆಯಲಿದೆ. 

ಅನೂಪ್ ಮುರಳಿ, ‘ತೃತೀಯ ಲಿಂಗಿಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅಮಾನವೀಯ ಕೃತ್ಯ ಮತ್ತು ತಾರತಮ್ಯ‌ಗಳನ್ನು ಮನಗಂಡಿದ್ದೇನೆ. ಇದೆಲ್ಲ ಕೊನೆಗೊಂಡು ಎಲ್ಲರಂತೆಯೇ ಬದುಕುವಂತಾಗಬೇಕು. ಅವರೆಲ್ಲ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ಉದ್ದೇಶದಿಂದ ಹಾಗೂ ಸುರಕ್ಷಿತ ಸಂವಹನ ವಾತಾವರಣವನ್ನು ಸೃಷ್ಟಿ ಮಾಡಲು ಈ ವೆಬ್‌ಸೈಟ್‌ ಅನ್ನು ರೂಪಿಸಲಾಗಿದೆ’ ಎಂದರು.

‘ಎಲ್‍ಜಿಬಿಟಿ ಕಾರ್ಯಕರ್ತರಾದ ಅಕೈ ಪದ್ಮಶಾಲಿ ಮತ್ತು ಅಲಿ ಖ್ವಾಜ ಅವರ ಬೆಂಬಲದೊಂದಿಗೆ ವೆಬ್‌ಸೈಟ್‌ ಹೆಚ್ಚಿನ ಸಂಪರ್ಕ ಹೊಂದುವ ಅಭಿಲಾಷೆ ಇದೆ’ ಎಂದರು.

ವೆಬ್‌ಸೈಟ್‌ ವಿಳಾಸ– www.ThePridebook.com 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !