ಲಾರಿ ಹರಿದು ಚಾಲಕ ಸಾವು

7

ಲಾರಿ ಹರಿದು ಚಾಲಕ ಸಾವು

Published:
Updated:

ಬೆಂಗಳೂರು: ಕೆ.ಆರ್.ಪುರದ ಗ್ರಾಫೈಟ್ ಇಂಡಿಯಾ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಲಾರಿ ಹರಿದು ಮಹಮದ್ ಶಬೀರ್ (27) ಎಂಬುವರು ಮೃತಪಟ್ಟಿದ್ದಾರೆ.

ಲಾರಿ ಚಾಲಕರಾದ ಮಹಾರಾಷ್ಟ್ರದ ಶಬೀರ್, ರಾತ್ರಿ 9 ಗಂಟೆ ಸುಮಾರಿಗೆ ‘ಏಷಿಯನ್ ಪೇಯಿಂಟ್ಸ್’ ಕಂಪನಿ ಗೋದಾಮಿಗೆ ಸರಕು ತಂದಿದ್ದರು. ಅದನ್ನು ಅನ್‌ಲೋಡ್ ಮಾಡುತ್ತಿದ್ದಾಗ ಕಂಪನಿಯ ಇನ್ನೊಂದು ಲಾರಿ ಅಲ್ಲಿಗೆ ಬಂದಿದೆ. ಅದರ ಚಾಲಕ ಲಾರಿಯನ್ನು ಗೋದಾಮಿನ ಪಕ್ಕಕ್ಕೆ ನಿಲ್ಲಿಸುವ ಸಲುವಾಗಿ ಹಿಮ್ಮುಖವಾಗಿ ಚಾಲನೆ ಮಾಡಿದ್ದಾನೆ. ಈ ವೇಳೆ ಶಬೀರ್‌ ಅವರಿಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದಾಗ ಚಕ್ರ ಮೈಮೇಲೆ ಹರಿದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನನ್ನು ವಶಕ್ಕೆ ಪಡೆದು ಲಾರಿ ಜಪ್ತಿ ಮಾಡಲಾಗಿದೆ ಎಂದು ಕೆ.ಆರ್.ಪುರ ಸಂಚಾರ ‍ಪೊಲೀಸರು ಹೇಳಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !