ಫೆ.12ರಂದು ವೀರಭದ್ರಸ್ವಾಮಿ ಮಹಾರಥೋತ್ಸವ

7

ಫೆ.12ರಂದು ವೀರಭದ್ರಸ್ವಾಮಿ ಮಹಾರಥೋತ್ಸವ

Published:
Updated:
Prajavani

ಬೆಂಗಳೂರು: ದೊಡ್ಡಬಳ್ಳಾಪುರದ ಬಳಿ ಇರುವ ಪುರಾತನ ಪುಣ್ಯಕ್ಷೇತ್ರ ಹುಲುಕುಡಿ ಬೆಟ್ಟದ ಭದ್ರಕಾಳಮ್ಮ ಮತ್ತು ವೀರಭದ್ರಸ್ವಾಮಿ ಮಹಾರಥೋತ್ಸವ ರಥಸಪ್ತಮಿ ದಿನವಾದ ಫೆ.12ರಂದು ಜರುಗಲಿದೆ.

ಅದರ ಮುನ್ನಾದಿನವಾದ ಸೋಮವಾರ ಅಗ್ನಿಕೊಂಡ,ಉಯ್ಯಾಲೋತ್ಸವ ಮತ್ತು ದೀಪಾರಾಧನೆ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 12ಕ್ಕೆ ನೂತನ ರಥಕ್ಕೆ ಕನಕಪುರ ದೇಗುಲ ಮಠದ ಚನ್ನಬಸವಸ್ವಾಮೀಜಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ರುದ್ರಾಭಿಷೇಕ, ಹೋಮ ಮತ್ತು ರಥೋತ್ಸವ ಜರುಗಲಿದೆ. ಸಭಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಗುತ್ತದೆ. ಸಂಸದ ವೀರಪ್ಪ ಮೊಯ್ಲಿ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಶಾಸಕ ಟಿ.ವೆಂಕಟರಮಣಯ್ಯ, ಶಾಸಕ ಎಂ.ವಿ. ವೀರಭದ್ರಯ್ಯ, ವಿಧಾನಪರಿಷತ್ ಸದಸ್ಯ ರವಿ ಭಾಗವಹಿಸಲಿದ್ದಾರೆ.

ಜಾತ್ರಾ ಮಹೋತ್ಸವದ ನಿಮಿತ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪೌರಾಣಿಕ ನಾಟಕ, ವೀರಗಾಸೆ ಡೊಳ್ಳು ಕುಣಿತ ಮತ್ತು ಕಂಸಾಳೆ ಹಾಗೂ ಇನ್ನೀತರ ಜನಪದ ನೃತ್ಯ ಪ್ರದರ್ಶನಏರ್ಪಡಿಸಲಾಗಿದೆ. ರಥೋತ್ಸವದ ಬಳಿಕ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಇರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕ್ಷೇತ್ರದ ಹಿನ್ನೆಲೆ: ಚಾರಣಿಗರಿಗೆ ಸಾಹಸದ ತಾಣವಾಗಿ, ಅಧ್ಯಾತ್ಮಿಕರಿಗೆ ಪುಣ್ಯ ಕ್ಷೇತ್ರವಾಗಿರುವ ದೊಡ್ಡಬಳ್ಳಾಪುರ ಬಳಿಯ ಪ್ರಸನ್ನ ಭದ್ರಕಾಳಿ ಸಹಿತ ವೀರಭದ್ರಸ್ವಾಮಿ ಬೆಟ್ಟ ಪವಿತ್ರ ಪುಣ್ಯಕ್ಷೇತ್ರವಷ್ಟೇ ಅಲ್ಲ, ಹರಿಹರರಿಬ್ಬರೂ ನೆಲೆಸಲು ಬಯಸಿದ್ದ ರಮ್ಯ ತಾಣ ಎಂದೂ ಸ್ಥಳ ಪುರಾಣ ಹೇಳುತ್ತದೆ. ವೀರಭದ್ರಸ್ವಾಮಿ ಬೆಟ್ಟದ ರಮ್ಯತೆಗೆ ಮನಸೋತು ನಾಟ್ಯ ಮಾಡಿದಾಗ ನರಸಿಂಹಸ್ವಾಮಿ ಈ ಬೆಟ್ಟವನ್ನು ಬಿಟ್ಟುಕೊಟ್ಟ ಆದ್ದರಿಂದ ವೀರಭದ್ರ ಬೆಟ್ಟದ ಮೇಲೆ ಶಿವ ಲಿಂಗವಾಗಿ ನೆಲೆ ನಿಂತಿದ್ದಾನೆ ಎಂದು ನಂಬಲಾಗಿದೆ. ಈ ಬೆಟ್ಟದಲ್ಲಿರುವ ಲಿಂಗಕ್ಕೆ ಘಟಸರ್ಪವೊಂದು ನಿತ್ಯ ಪ್ರದಕ್ಷಿಣೆ ಹಾಕುತ್ತಿತ್ತು ಎಂದು ಹೇಳಲಾಗುತ್ತದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !