‘ಅಂಗವೈಕಲ್ಯ ಗುರುತಿಸಲು ತಾಯಿ ಪಾತ್ರ ಬಹುಮುಖ್ಯ’

ಸೋಮವಾರ, ಮಾರ್ಚ್ 25, 2019
31 °C

‘ಅಂಗವೈಕಲ್ಯ ಗುರುತಿಸಲು ತಾಯಿ ಪಾತ್ರ ಬಹುಮುಖ್ಯ’

Published:
Updated:
Prajavani

ಬೆಂಗಳೂರು: ‘ಮಕ್ಕಳಲ್ಲಿರುವ ಅಂಗವೈಕಲ್ಯ ಗುರುತಿಸುವಲ್ಲಿ ತಾಯಿಯ ಪಾತ್ರ ಬಹುಮುಖ್ಯ’ ಎಂದು ಡಾ.ಎಸ್.ಆರ್.ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್.ನಾಗರಾಜ ಹೇಳಿದರು. 

ಎಸ್.ಆರ್.ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಯಂದಿರ ತರಬೇತಿ ಕೇಂದ್ರದ 12ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. 

‘ಮನೆಯ ಸದಸ್ಯರಿಗೆ ಪ್ರಭಾವ ಬೀರುವಂತೆ ತಾಯಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು’ ಎಂದರು.

‘ಶ್ರವಣ ದೋಷವುಳ್ಳ ಮಕ್ಕಳು ಪೂರ್ವ ಪ್ರಾಥಮಿಕ ತರಬೇತಿಯ ನಂತರ ಸಾಮಾನ್ಯ ಶಾಲೆಗಳಿಗೆ ಸೇರಿ, ಅಲ್ಲಿನ ಮಕ್ಕಳ ಜತೆ ಬೆರೆತು, ಬೆಳೆಯುವುದರಿಂದ ಅವರಲ್ಲಿ ಧೈರ್ಯ ಹೆಚ್ಚುತ್ತದೆ. ಸಂಸ್ಥೆಗೆ ಬರುವ ಪೋಷಕರು ಇತರ ಪೋಷಕರಿಗೂ ವಾಕ್‌ ಮತ್ತು ಶ್ರವಣ ತರಬೇತಿ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲೆ ರಶ್ಮಿ ಜೆ.ಭಟ್ ಹಾಗೂ ತಾಯಂದಿರ ತರಬೇತಿ ಕೇಂದ್ರದ ಸಂಯೋಜಕಿ ರತ್ನಾ ಬಿ.ಶೆಟ್ಟಿ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !