ಬಿಎಂಎಸ್‌ನಿಂದ ಜನಪದ ಸುಗ್ಗಿ

ಗುರುವಾರ , ಮಾರ್ಚ್ 21, 2019
32 °C

ಬಿಎಂಎಸ್‌ನಿಂದ ಜನಪದ ಸುಗ್ಗಿ

Published:
Updated:
Prajavani

ಬೆಂಗಳೂರು: ‘ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆಯೇ ಬೆಳೆಸುವುದಕ್ಕಿಂತ, ಕಲ್ಲು, ಮಣ್ಣಿನೊಂದಿಗೆ ಆಡಲು ಬಿಡಬೇಕು. ಪರಿಸರದೊಂದಿಗೆ ಬೆಳೆಯಲು ಅನುವು ಮಾಡಿಕೊಡಬೇಕು’ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು. 

ಬಿ.ಎಂ.ಎಸ್.ಮಹಿಳಾ ಮಹಾ ವಿದ್ಯಾಲಯ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜನಪದ ಸುಗ್ಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಬೀದಿಯಲ್ಲಿ ಬೆಳೆದ ಮಕ್ಕಳು ಬೆಳೆದರು, ಕೋಣೆಯಲ್ಲಿ ಬೆಳೆದ ಮಕ್ಕಳು ಕೊಳೆತು ಹೋದರು’ ಎಂಬ ಮಾತು ಇಂದಿಗೂ ಪ್ರಸ್ತುತ. ಹೆಣ್ಣು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾಳೆ. ಆದರೆ, ಇನ್ನೂ ಹೆಚ್ಚು ಅವಕಾಶಗಳು ಸಿಗಬೇಕು’ ಎಂದು ಹೇಳಿದರು.

ಬಿಎಂಎಸ್ ಶಿಕ್ಷಣ ದತ್ತಿಯ ಧರ್ಮದರ್ಶಿ ಎಂ.ಮದನ್‍ಗೋಪಾಲ್, ‘ಜನಪದ ರಾಷ್ಟ್ರದ ಸಂಸ್ಕೃತಿ’ ಎಂದು ಬಣ್ಣಿಸಿದರು.

ಯಕ್ಷಗಾನ, ಡೊಳ್ಳು ಕುಣಿತ, ವೀರಗಾಸೆ, ಕರಗ, ಪಟಕುಣಿತ, ಕಂಸಾಳೆ,  ಕೋಲಾಟ, ಕೀಲುಕುದುರೆ, ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು. 

ಕುಂಟೆ ಬಿಲ್ಲೆ, ಲಗೋರಿ, ಬುಗರಿ, ಚಿನ್ನಿ–ದಾಂಡು ಆಟಗಳು ಗಮನ ಸೆಳೆದವು. ಮಹಾವಿದ್ಯಾಲಯದ ಅಧ್ಯಕ್ಷೆ ಬಿ.ಎಸ್.ರಾಗಿಣಿ ನಾರಾಯಣ್, ಗಾಯಕಿ ಸ್ಪರ್ಶ ಹಾಗೂ ಶಿಕ್ಷಣ ದತ್ತಿಯ ಧರ್ಮದರ್ಶಿ ಎನ್.ನಂದಾ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !