ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ ಸ್ಮಾರ್ಟ್‌ ಹ್ಯಾಕಥಾನ್’ ಗೆದ್ದ ಸಿಎಂಆರ್‌ಐಟಿ ವಿದ್ಯಾರ್ಥಿಗಳು

Last Updated 14 ಮಾರ್ಚ್ 2019, 20:02 IST
ಅಕ್ಷರ ಗಾತ್ರ

ಇತ್ತೀಚೆಗೆ ನೋಯ್ಡಾದಲ್ಲಿ ನಡೆದ ‘ಇಂಡಿಯಾ ಸ್ಮಾರ್ಟ್ ಹ್ಯಾಕಥಾನ್-2019’ ಸ್ಪರ್ಧೆಯಲ್ಲಿ ಸಿಎಂಆರ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಸಿಎಂಆರ್‌ಐಟಿ) ಪ್ರಶಸ್ತಿ ಗೆದ್ದಿದೆ. ಸಿಎಂಆರ್‌ಐಟಿ ವಿದ್ಯಾರ್ಥಿಗಳಾದ ಧ್ರುವ ವತ್ಸ ಮಿಶ್ರಾ, ಗೌತಮ್ ಚೌಹಾಣ್, ಭವ್ಯಾ, ಶೈಲವ್ ಶ್ರೇಷ್ಠಾ, ಅದಿತಿ ಶರ್ಮ ಹಾಗೂ ಅಶ್ವಿನಿ ಬೊಯಿಟೆ ಪಿ. ಅವರು ತಮ್ಮ ಜಾಣ್ಮೆಯ ಮೂಲಕ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಸಿಎಂಆರ್‌ಐಟಿ ಕಾಲೇಜಿನ ವಿದ್ಯಾರ್ಥಿಗಳು ದಾಖಲೆ ವಿಶ್ಲೇಷಿಸುವ ತಂತ್ರಾಂಶವಾದ ಇ-ಸಲ್ಯೂಷನ್ ಕಂಡುಹಿಡಿದಿದ್ದು, ಇದು ಇ-ಕಾಮರ್ಸ್ ಕ್ಷೇತ್ರದಲ್ಲಿರುವವರಿಗೆ ಬಳಕೆಗೆ ಯೋಗ್ಯವಾಗಿದೆ. ಅಪ್ಲಿಕೇಷನ್‍ಗಳಲ್ಲಿನ ಪುಶ್ ನೋಟಿಫಿಕೇಷನ್‍ಗಳು ಹಾಗೂ ಬಳಕೆದಾರರಿಗೆ ಸೂಕ್ತ ಅನ್ನಿಸುವ ರೂಪದಲ್ಲಿ ಇದನ್ನು ಸಿದ್ಧಗೊಳಿಸಲಾಗಿದೆ.

ಪ್ರಶಸ್ತಿ ಹಾಗೂ ಸಾಧನೆ

ಸ್ಮಾರ್ಟ್ ಇಂಡಿಯಾ ‘ಹ್ಯಾಕಥಾನ್ 2019’ರಡಿ ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಗೆ ₹ 1 ಲಕ್ಷ ಮೊತ್ತದ ಪ್ರಶಸ್ತಿ ಲಭಿಸಿದೆ. ನಿತ್ಯದ ಬದುಕಿನಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ವೇದಿಕೆ ಕಲ್ಪಿಸುವುದು. ಅದರಲ್ಲೂ ವಿದ್ಯಾರ್ಥಿಗಳಿಂದ ಇದಕ್ಕೊಂದು ಪರಿಹಾರ ಪಡೆಯುವುದು ಸ್ಪರ್ಧೆ ಆಯೋಜನೆಯ ಹಿಂದಿನ ಪ್ರಮುಖ ಉದ್ದೇಶವಾಗಿತ್ತು. ಅಲ್ಲದೇ ಉತ್ಪನ್ನದ ನಾವಿನ್ಯತೆಯ ಸಂಸ್ಕೃತಿ ಮತ್ತು ಸಮಸ್ಯೆ ಪರಿಹರಿಸುವಿಕೆಯ ಮನಸ್ಥಿತಿ ಹುಟ್ಟುಹಾಕುವುದು ಕೂಡ ಪ್ರಮುಖ ಧ್ಯೇಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT