ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಜಾಹೀರಾತು ಹಾವಳಿಗೆ ಮತ್ತೆ ಅವಕಾಶ?

ಪಾಲಿಕೆ ನಿರ್ಣಯವನ್ನು ಬದಿಗಿಟ್ಟು ವಾಣಿಜ್ಯ ಜಾಹೀರಾತುಗಳಿಗೆ ಅನುಮತಿ ನೀಡಲು ಚಿಂತನೆ
Last Updated 22 ಮಾರ್ಚ್ 2019, 19:57 IST
ಅಕ್ಷರ ಗಾತ್ರ

ಬೆಂಗಳೂರು: ಪ್ಲಾಸ್ಟಿಕ್‌ ಅಂಶವಿಲ್ಲದ ಹಾಗೂ ಮಣ್ಣಿನಲ್ಲಿ ಕರಗುವ ಸಾಮಗ್ರಿ ಗಳಿಂದ (ಬಯೋಡಿಗ್ರೆಡೇಬಲ್‌) ತಯಾ ರಿಸಿದ ಜಾಹೀರಾತುಗಳಿಗೆ ಅವಕಾಶ ನೀಡಿ ನಗರದಲ್ಲಿ ಮತ್ತೆ ವಾಣಿಜ್ಯ ಜಾಹೀರಾತು ಹಾವಳಿಗೆ ಅವ ಕಾಶ ಕಲ್ಪಿಸಲಾಗುತ್ತದೆಯೇ?

’ನಗರದಲ್ಲಿ ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ಬೈಲಾ 2018’ರ ಕರಡನ್ನು ಪರಿಷ್ಕರಿಸಲು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ನೇತೃತ್ವದಲ್ಲಿ ಮಾ.20ರಂದು ನಡೆದ ಸಭೆಯ ನಡಾವಳಿಗಳು ಇಂತಹ ಸಂದೇಹಕ್ಕೆ ಮೂಡಿಸಿವೆ.

ಜಾಹೀರಾತು ಬೈಲಾ ರೂಪಿಸುವ ಮುನ್ನ ಇಲಾಖೆಯ ಅಭಿಪ್ರಾಯ ಪಡೆದಿಲ್ಲ ಎಂದು ತಗಾದೆ ತೆಗೆದಿದ್ದ ಸಂಸದೀಯ ವ್ಯವಹಾರಗಳ ಇಲಾಖೆ, ಬೈಲಾ ಕರಡಿನಲ್ಲಿರುವ ಕೆಲವು ಲೋಪಗಳನ್ನು ಪಟ್ಟಿಮಾಡಿತ್ತು. ಅವುಗಳನ್ನಷ್ಟೇ ಪರಿಶೀಲಿಸುವ ಬದಲು ಮತ್ತೆ ಎಲ್‌ಇಡಿ ಫಲಕ ಹಾಗೂ ಹೊರಾಂಗಣ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದೂ ಸೇರಿದಂತೆ ಪಾಲಿಕೆ ನಿರ್ಣಯದ ಪ್ರಮುಖ ಆಶಯಗಳನ್ನೇ ಅಲ್ಲಗಳೆಯುವಂತಹ ಕೆಲವು ಪ್ರಸ್ತಾವಗಳನ್ನು ಕರಡಿನಲ್ಲಿ ಸೇರಿಸುವ ಬಗ್ಗೆ ಚರ್ಚೆಯಾಗಿದೆ.

ವಾಣಿಜ್ಯ ಪ್ರದೇಶ, ಕೈಗಾರಿಕಾ ಪ್ರದೇಶ, ಸಾರಿಗೆ, ಟ್ರಕ್‌, ಬಸ್‌, ಬಸ್‌ ನಿಲ್ದಾಣ, ಮಾಲ್‌, ಸಿನಿಮಾ ಮಂದಿರ, ಮೆಟ್ರೊ ಕಟ್ಟಡ, ವಿಮಾನ ನಿಲ್ದಾಣದಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ವಾಣಿಜ್ಯ ಜಾಹೀರಾತುಗಳಿಗೆ ನವದೆಹಲಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ಬೈಲಾ ಕರಡಿಗೆ ತಿದ್ದುಪಡಿ ಮಾಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಎಲೆಕ್ಟ್ರಾನಿಕ್‌ ಡಿಸ್‌ಪ್ಲೇ (ಎಲ್‌ಇಡಿ) ಜಾಹೀರಾತು ಅಳವಡಿಸಲು,ಅವಶ್ಯ ಇರುವ ಸ್ಥಳಗಳಲ್ಲಿ ಅಳವಡಿಸುವ ಜಾಹೀರಾತು ಸಾಮಗ್ರಿ ಮಣ್ಣಿನಲ್ಲಿ ಕರಗುವಂತಿರಬೇಕು ಎಂಬ ಷರತ್ತು ವಿಧಿಸಲು ಯೋಚಿಸಲಾಗಿದೆ.

‘ಬೈಲಾ ಕರಡನ್ನು ಅಂತಿಮಗೊಳಿಸಿ ಶೀಘ್ರವೇ ಜಾರಿಗೊಳಿಸುವಂತೆ ಈ ಪ್ರಕರಣದ ವಿಚಾರಣೆ ಸಂದರ್ಭಗಳಲ್ಲಿ ಹೈಕೋರ್ಟ್‌ ನಿರ್ದೇಶನ ನೀಡುತ್ತಲೇ ಬಂದಿದೆ. ವಾರದೊಳಗೆ ಬೈಲಾ ಅಂತಿಮಗೊಳಿಸುವಂತೆ ಮಾರ್ಚ್‌ 15ರಂದು ಪಾಲಿಕೆಗೆ ಸೂಚನೆ ನೀಡಿದೆ. ಖಾಸಗಿ ಸ್ವತ್ತುಗಳಲ್ಲಿ ವಾಣಿಜ್ಯ ಜಾಹೀರಾತುಗಳಿಗೆ ನಿಷೇಧ ಹೇರಿದ್ದರಿಂದ ಜಾಹೀರಾತು ವಹಿವಾಟುದಾರರ ಮೂಲಭೂತ ಹಕ್ಕಿಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ವಾಣಿಜ್ಯ ಜಾಹೀರಾತುಗಳಿಗೂ ಅವಕಾಶ ಕಲ್ಪಿಸಬೇಕಾಗುತ್ತದೆ. ಈ ಕುರಿತು ಸುಪ್ರೀಂ ಕೋರ್ಟ್‌ ಆದೇಶವೂ ಇದೆ. ಇವೆಲ್ಲವನ್ನು ಪರಾಮರ್ಶಿಸಿ ಕರಡು ‍ಪರಿಷ್ಕರಿಸಬೇಕು’ ಎಂದು ಸಭೆಯಲ್ಲಿ ಅಡ್ವೊಕೇಟ್‌ ಜನರಲ್‌ ಉದಯ್‌ ಹೊಳ್ಳ ಸಲಹೆ ನೀಡಿದರು.

ಆದಾಯ ದೃಷ್ಟಿಯಿಂದ ಬಿಲ್‌ ಬೋರ್ಡ್‌ ಜಾಹೀರಾತುಗಳಿಗೆ ಹಾಗೂ ವಾಣಿಜ್ಯ ಜಾಹೀರಾತುಗಳಿಗೆ ಅನುಮತಿ ನೀಡುವುದು ಸೂಕ್ತ. ಮಣ್ಣಿನಲ್ಲಿ ಕರಗುವ ಸಾಮಗ್ರಿಗಳಿಂದ ತಯಾರಿಸುವ ಜಾಹೀರಾತುಗಳಿಗೆ ಅವಕಾಶ ನೀಡ ಬೇಕು ಎಂದು ಜಿ.ಪರಮೇಶ್ವರ ಸಭೆ ಯಲ್ಲಿ ಸೂಚಿಸಿದ್ದರು.

ಬೆಂಗಳೂರು ಮೆಟ್ರೊ ರೈಲು ನಿಗಮ ಮತ್ತು ಇತರ ಮನವಿಗಳನ್ನು ಪರಿಗಣಿಸಿ ನವದೆಹಲಿಯ ಜಾಹೀರಾತು ಬೈಲಾ ಪ್ರಕಾರ ಇಲ್ಲಿನ ಬೈಲಾವನ್ನು ಪರಿಷ್ಕರಿಸಿ ಇದೇ 25ರ ಒಳಗೆ ಸಲ್ಲಿಸುವಂತೆಯೂ ಪಾಲಿಕೆಗೆ ಸೂಚಿಸಲಾಗಿದೆ. ಬೈಲಾ ಅಂತಿಮಗೊಳಿಸಲು ಇದೇ 26ರಂದು ಸಭೆ ನಡೆಯಲಿದೆ.

ಬೈಲಾ ಕರಡು– ಹೊಸ ಸೇರ್ಪಡೆ ಏನು?(ಸಭೆಯ ನಿರ್ಣಯದ ಪ್ರಕಾರ)

* ಜಾಹೀರಾತು ಫಲಕಗಳನ್ನು ಅಳವಡಿಸುವ ಪ್ರದೇಶಗಳನ್ನು ವರ್ಗೀಕರಿಸಿ ಅವುಗಳ ಸ್ವರೂಪ ಮತ್ತು ವರ್ಗೀಕರಣಕ್ಕೆ ಅನುಗುಣವಾಗಿ ಅಳವಡಿಸುವ ಜಾಹೀರಾತುಗಳ ಫಲಕಗಳ ಅಳತೆ ಮತ್ತು ಅವುಗಳ ಸಂಖ್ಯೆ ನಿರ್ದಿಷ್ಟಪಡಿಸುವುದು

*ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ಒಂದೇ ಮಾದರಿಯ ಅಳತೆಯ ಜಾಹೀರಾತು ಫಲಕಗಳನ್ನು ಒಂಟಿ ಕಂಬ ಬಳಸಿ ನಿಲ್ಲಿಸುವುದಕ್ಕೆ ಅನುವು ಮಾಡಿಕೊಡುವುದು.

*ವಾಸಸ್ಥಳಗಳಲ್ಲಿ ವಾಣಿಜ್ಯ ಜಾಹಿರಾತುಗಳಿಗೆ ಅವಕಾಶ ಇಲ್ಲ

ಪಾದಚಾರಿ ಮಾರ್ಗದಲ್ಲಿ?

‘ಪಾದಚಾರಿಗಳಿಗೆ ತೊಂದರೆ ಆಗದಂತೆ ಅಳವಡಿಸುವ ಜಾಹೀರಾತುಗಳ ಗಾತ್ರ ಮತ್ತು, ಅವುಗಳ ವಿಧ ಹಾಗೂ ಸಂಖ್ಯೆಗಳನ್ನು ನಿರ್ದಿಷ್ಟಪಡಿಸಬೇಕು’ ಎಂದು ಸಭೆ ನಿರ್ಣಯ ಕೈಗೊಂಡಿದೆ.

* ಜಾಹೀರಾತು ಬೈಲಾ ಕರಡನ್ನು ಮತ್ತೆ ಪರಿಷ್ಕರಲು ನಿರ್ಧರಿಸಿರುವುದಕ್ಕೆ ಪಾಲಿಕೆಯ ವಿರೋಧ ಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಸರ್ಕಾರ ಜಾಹೀರಾತು ಕಂಪನಿಗಳ ಲಾಬಿಗೆ ಸರ್ಕಾರ ಮಣಿದಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ನೀತಿ ನಿರೂಪಣೆಗಳಿಗೆ ಸಂಬಂಧಿಸಿದ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ. ಉಪಮುಖ್ಯಮಂತ್ರಿಯವರು ಜಾಹೀರಾತು ಬೈಲಾ ತಿದ್ದುಪಡಿ ಮಾಡಲು ಸಭೆ ನಡೆಸಿದ್ದೇ ತಪ್ಪು. ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ’ ವಿರೋಧಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

* ವಾಣಿಜ್ಯ ಜಾಹೀರಾತು ನಿಷೇಧದ ಬಳಿಕ ನಗರದ ಅಂದ ಹೆಚ್ಚಿತ್ತು. ಪಾಲಿಕೆ ಸರ್ವಾನುಮತದ ನಿರ್ಣಯವನ್ನೇ ಬುಡಮೇಲು ಮಾಡುವುದೆಂದರೆ ಏನರ್ಥ. ಚುನಾವಣೆ ಖರ್ಚಿಗೆ ಹಣ ಸಂಗ್ರಹಿಸುವ ಮತ್ತೊಂದು ಪ್ರಯತ್ನವಿದು

-ಪದ್ಮನಾಭ ರೆಡ್ಡಿ,ಪಾಲಿಕೆ ವಿರೋಧಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT