ಮಂಗಳವಾರ, ಜೂಲೈ 7, 2020
27 °C

ಬಂಡೀಪುರದಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದ ಕುಂದುಕೆರೆ ವಲಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೋಯಾರ್‌ ಕಣಿವೆ ಬಳಿ ಬೆಂಕಿ ಬಿದ್ದಿದ್ದು, ಅಲೇಗೌಡನಕಟ್ಟೆ ಬಳಿ ಕಿಡಿಗೇಡಿಗಳು ಬೆಂಕಿಹಚ್ಚಿರುವ ಶಂಕೆ ಇದೆ.

ಸುಮಾರು 30 ಎಕರೆ ಪ್ರದೇಶವನ್ನು ಬೆಂಕಿ ಆವರಿಸಿರುವ ಅಂದಾಜು ಇದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

ಹಳ್ಳದಲ್ಲಿ ಬೆಂಕಿ ಉರಿಯುತ್ತಿರುವುದರಿಂದ ಇಳಿದು ನಂದಿಸಲು ಸಾಧ್ಯವಾಗುತ್ತಿಲ್ಲ. ಬೆಂಕಿಯು ಹೆಚ್ಚಿನ ಭಾಗಕ್ಕೆ ವ್ಯಾಪಿಸದಂತೆ ಎದುರು ಬೆಂಕಿ ನೀಡಿ ತಡೆಯಲು ಸಿಬ್ಬಂದಿ ಒತ್ತು ನೀಡಿದ್ದಾರೆ ಎಂದು ಬಂಡೀಪುರ ಹುಲಿಯೋಜನೆ ನಿರ್ದೇಶಕ ಬಾಲಚಂದರ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು