ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷಯರೋಗ ಮುಕ್ತ ಜಿಲ್ಲೆಗೆ ಎಲ್ಲರೂ ಸಹಕರಿಸಿ’

ವಿಶ್ವ ಕ್ಷಯರೋಗ ದಿನಾಚರಣೆ: ಜಾಗೃತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ
Last Updated 25 ಮಾರ್ಚ್ 2019, 14:59 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯನ್ನು ಕ್ಷಯರೋಗದಿಂದ ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಶ್ರೀನಿವಾಸ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ 'ಇದು ಸಮಯ ಕ್ಷಯ ಮುಕ್ತ ವಿಶ್ವ ನಿರ್ಮಾಣ' ಎಂಬ ಘೋಷ ವಾಕ್ಯದ ಅಡಿ ನಡೆದ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷಯರೋಗದ ಬಗ್ಗೆ ಅಧಿಕಾರಿಗಳು, ಆಶಾ‌ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಜನಪ್ರತಿನಿಧಿಗಳ ಜತೆಗೆ ಯುವಕರೂ ಎಲ್ಲರಿಗೂ ಜಾಗೃತಿ ಮೂಡಿಸಬೇಕು. ಈ ಮೂಲಕ ಸದೃಢ ಮತ್ತು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸಮರೋಪಾದಿಯಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದರು.

ಯಾವುದೇ ರೀತಿಯಲ್ಲಿಯೂ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಯುವಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮ್ಯಾರಾಥಾನ್ ಮೂಲಕ ಅರಿವು ಮೂಡಿಸಲಾಗುತ್ತಿದ್ದೆ. ಸುತ್ತಮುತ್ತಲಿನವರಿಗೆ ಈ ಕುರಿತು ಮಾಹಿತಿ ನೀಡಬೇಕು. ಈ ಮೂಲಕ ಕ್ಷಯರೋಗ ತಡೆಗೆ ಯುವಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಗದಗ ಜಿಲ್ಲೆಯ ಜಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ರಮೇಶ ಎಚ್.ಮಾಯಪ್ಪನವರು ವಿಶೇಷ ಉಪನ್ಯಾಸ ನೀಡಿ, ‘ಎಂಡ್ ಟಿಬಿ ಸ್ಟ್ರಾಟಜಿ’ ವಿಷಯದ ಮೇಲೆ 1882 ಮಾ. 24ರಲ್ಲಿ ಜರ್ಮನಿ ದೇಶದ ಡಾ.ರಾಬರ್ಟ್‌ ಕಾಕ್ ಎಂಬ ವಿಜ್ಞಾನಿ ಈ ಟಿ.ಬಿ ಕಾಯಿಲೆ ಕಂಡು ಹಿಡಿದರು. ಅಂದಿನಿಂದ ಹಿಂದಿನವರೆಗೂ ಪ್ರತಿವರ್ಷ ಮಾ. 24ರಂದು ‘ವಿಶ್ವ ಕ್ಷಯರೋಗದ ದಿನಾಚರಣೆ’ ಇಡೀ ವಿಶ್ವದಲ್ಲಿ ಆಚರಿಸಲಾಗುತ್ತದೆ. ರಾಬರ್ಟ್ ಕಾಕ್‌ 1990ರಲ್ಲಿ ಟ್ಯಾಬ್ಲೆಟ್ ಕಂಡು ಹಿಡಿದರು. ಮೊದಲು ಚಿಕಿತ್ಸೆ ಇರಲಿಲ್ಲ. ಉತ್ತಮ ಗಾಳಿ,‌ ಪೌಷ್ಟಿಕಾಂಶಯುಕ್ತ ಆಹಾರ ಮಾತ್ರ ನೀಡಲಾಗುತ್ತಿತ್ತು. ಆದರೆ ಇದರಿಂದ ಕೆಲವು ಜನರಿಗೆ ಹುಷಾರಾಗುತ್ತಿರಲಿಲ್ಲ. ಕೆಮ್ಮುವಾಗ ಕರವಸ್ತ್ರ‌ ಬಳಕೆ ಮಾಡಬೇಕು. ಕಫವನ್ನು ಎಲ್ಲೆಂದರಲ್ಲಿ ಉಗುಳಬಾರದು. ಇದರಿಂದ ರೋಗ ಹರಡುತ್ತದೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣನವರ ಮಾತನಾಡಿದರು.ಕ್ಷಯರೋಗ ಕುರಿತು ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಮ್ಯಾರಾಥಾನ್ ನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಂಬಯ್ಯ, ಗಂಗಾವತಿ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವಡಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ‌ ಡಾ.ಎಂ.ಜಿ.ಮಹೇಶ, ಐಎಂಎ ಅಧ್ಯಕ್ಷ ಡಾ.ಎಸ್.ಎಸ್.ಕಂಬ್ಳಿಯ್ಯಾಳ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಎಚ್.ರಾಮಾಂಜನೇಯ,‌ ಜಿಲ್ಲಾ ಆರ್.ಸಿ.ಎಚ್.‌ಅಧಿಕಾರಿ ಟಿ.ಲಿಂಗರಾಜ್, ಡಿಎಲ್ ಒ ಡಾ.ಎಸ್.ಕೆ.ದೇಸಾಯಿ,ದೈಹಿಕ ಶಿಕ್ಷಣ ನಿರ್ದೇಶಕ ಜಯ‌ರಾಂ ಮುರಡಿ ಇದ್ದರು.

*ಕ್ಷಯರೋಗಿಗಳಿಗೆ ಪೌಷ್ಠಿಕ ಆಹಾರದ ಸಲುವಾಗಿ ₹ 500 ಅನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಎಲ್ಲ ಖಾಸಗಿ ಆಸ್ಪತ್ರೆಯ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಾಹಿತಿಯನ್ನು ನಮ್ಮ ಇಲಾಖೆಗೆ ಸಲ್ಲಿಸಬೇಕು.

–ಡಾ.ಜಂಬಯ್ಯ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT