ನಿರ್ಭೀತಿಯಿಂದ ಮತ ಚಲಾಯಿಸುವಂತೆ ಸಂದೇಶ: ಹೋಮ್‌ಗಾರ್ಡ್‌ ಪಥಸಂಚಲನ

ಮಂಗಳವಾರ, ಏಪ್ರಿಲ್ 23, 2019
33 °C
ಚುನಾವಣೆ

ನಿರ್ಭೀತಿಯಿಂದ ಮತ ಚಲಾಯಿಸುವಂತೆ ಸಂದೇಶ: ಹೋಮ್‌ಗಾರ್ಡ್‌ ಪಥಸಂಚಲನ

Published:
Updated:
Prajavani

ಕಲಬುರ್ಗಿ: ಲೋಕಸಭಾ ಚುನಾವಣೆಗೆ ನೇಮಕಗೊಜಿಲ್ಲಾ ಹೋಮ್‌ಗಾರ್ಡ್‌ ಸಿಬ್ಬಂದಿ ಭಾನುವಾರ ನಗರದಲ್ಲಿ ಪಥ ಸಂಚಲನ ನಡೆಸಿ ನಿರ್ಭೀತಿಯಿಂದ ಮತ ಚಲಾಯಿಸುವಂತೆ ಸಂದೇಶ ಸಾರಿದರು.

ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಪಥಸಂಚಲನವು ನಗರದ ಸೂಪರ್ ಮಾರ್ಕೆಟ್‌ನಿಂದ ಪ್ರಾರಂಭವಾಗಿ ಬಾಂಡೆ ಬಜಾರ್, ಹುಮನಾಬಾದ್ ಬೇಸ್, ಮುಸ್ಲಿಂ ಚೌಕ್, ನ್ಯಾಷನಲ್ ಕಾಲೇಜು, ಸರಾಫ್‌ ಬಜಾರ್‌, ಜಗತ್ ವೃತ್ತದ ಮೂಲಕ ಪೊಲೀಸ್ ಕವಾಯತು ಮೈದಾನ ತಲುಪಿತು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ರಾಜಾ.ಪಿ., ಹೋಮ್‌ಗಾರ್ಡ್‌ ಕಮಾಂಡೆಂಟ್ ಸಂತೋಷ ಪಾಟೀಲ ನೇತೃತ್ವ ವಹಿಸಿದ್ದರು. 500ಕ್ಕೂ ಹೆಚ್ಚು ಹೋಮ್‌ಗಾರ್ಡ್‌ಗಳು ಪಾಲ್ಗೊಂಡಿದ್ದರು.

ಪಥಸಂಚಲನ ಮಾರ್ಗದುದ್ದಕ್ಕೂ ಏ. 23 ರಂದು ನಡೆಯುವ ಮತದಾನದಂದು ಯಾವುದೇ ಆಮಿಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸಲಾಯಿತು. ಸ್ವೀಪ್ ಸಮಿತಿ ಹೊರತಂದಿರುವ ಕರಪತ್ರಗಳನ್ನು ಸಹ ವಿತರಿಸಲಾಯಿತು.

* ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿಗಾಗಿ ವಿನೂತನ ಪ್ರಚಾರ ಆಯೋಜನೆ

* ಕಲಬುರ್ಗಿ ಜಿಲ್ಲೆಯ 500ಕ್ಕೂ ಹೆಚ್ಚು ಗೃಹರಕ್ಷಕ ದಳ ಸಿಬ್ಬಂದಿ ಯಿಂದ ನಡೆದ ಪಥಸಂಚಲನ

* ಪ‍ಥಸಂಚಲನದಲ್ಲಿ ಮಹಿಳಾ ಸಿಬ್ಬಂದಿಯೂ ಭಾಗಿ

* ಏ. 23 ರಂದು ಕಡ್ಡಾಯವಾಗಿ ಮತ ಚಲಾವಣೆಗೆ ಜಾಗೃತಿ ಮೂಡಿಸಿದ ಸ್ವೀಪ‍್‌ ಸಮಿತಿ ಅಧಿಕಾರಿಗಳು

* ಯಾವುದೇ ಆಮಿಷಕ್ಕೆ ಒಳಗಾಗದಂತೆ ಘೋಷಣೆ

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !