ಕಾಮಧೇನು ಗೋ ಶಾಲೆಗೆ ಮೇವು; ಜಿಲ್ಲಾ ಪೊಲೀಸ್ ಉಪ ಅಧೀಕ್ಷಕಿ ಶ್ರುತಿ ಕೊಡುಗೆ

ಭಾನುವಾರ, ಮೇ 26, 2019
22 °C

ಕಾಮಧೇನು ಗೋ ಶಾಲೆಗೆ ಮೇವು; ಜಿಲ್ಲಾ ಪೊಲೀಸ್ ಉಪ ಅಧೀಕ್ಷಕಿ ಶ್ರುತಿ ಕೊಡುಗೆ

Published:
Updated:
Prajavani

ಹೇರೂರು (ಬಾಳೆಹೊನ್ನೂರು): ಸಮೀಪದ ಕೆಮ್ಮಣ್ಣುವಿನಲ್ಲಿ ಇರುವ ಕಾಮಧೇನು ಗೋ ಶಾಲೆಗೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಉಪ ಅಧೀಕ್ಷಕಿ ಶ್ರುತಿ ಅವರು ಒಂದು ಲೋಡು ಮೇವನ್ನು ದಾನವಾಗಿ ನೀಡಿದ್ದಾರೆ ಎಂದು ಗೋಸೇವಾ ಕೇಂದ್ರದ ನಾಗೇಶ್ ಅಂಗೀರಸ ತಿಳಿಸಿದ್ದಾರೆ.

‘ಅಪರೂಪದ ಸಾಮಾಜಿಕ ಕಳಕಳಿ ಹೊಂದಿರುವ ದಕ್ಷ ಪೊಲೀಸ್ ಅಧಿಕಾರಿ ಶ್ರುತಿ ಅವರು, ದೇಶದ ಸನಾತನ ಪರಂಪರೆಯಂತೆ ಎಲ್ಲಾ ಪ್ರಾಣಿಗಳಲ್ಲಿಯೂ ದೇವರನ್ನು ಕಾಣುವ ಮಹೋನ್ನತ ಆದರ್ಶ ಹೊಂದಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಅಧಿಕಾರಿಗಳು, ರಾಜಕಾರಣಿಗಳು ಎಂಬುದಾಗಿ ಭೇದಭಾವ ಇರಬಾರದು. ದೇಶದ ಋಣ ತೀರಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದ್ದು, ಸಾಮಾಜಿಕ ಕಾರ್ಯಗಳು ಎಲ್ಲೇ ನಡೆದರೂ ಅದನ್ನು ಬೆಂಬಲಿಸುವ ಪ್ರವೃತ್ತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’
ಎಂದರು.

‘ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಣೆ ಹಾಗೂ ಮೂಕ ಪ್ರಾಣಿಗಳು ಹಾಗೂ ವನ್ಯ ಪ್ರಾಣಿಗಳ ಹಿಂಸೆಯ ವಿರುದ್ಧ ಪೊಲೀಸ್ ಇಲಾಖೆಯು ಯಾವುದೇ ಮುಜುಗರಕ್ಕೆ ಒಳಪಡದೆ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಬದ್ಧವಾಗಿದೆ. ಜನತೆಯು ತಮಗಾದ ಅನ್ಯಾಯವನ್ನು ನೇರವಾಗಿ ಸಮೀಪದ ಠಾಣಾಧಿಕಾರಿಗಳ ಗಮನಕ್ಕೆ ತಂದು ಪೊಲೀಸ್ ಇಲಾಖೆಯ ನೆರವನ್ನು ಪಡೆದುಕೊಳ್ಳಬೇಕು’ ಎಂದು ಅವರು ವಿನಂತಿಸಿದರು.

ಮುತ್ತಿನಕೊಪ್ಪದ ಹುಲ್ಲಿನ ವ್ಯಾಪಾರಿ ಶ್ರೀಕಾಂತ್‍ಗೌಡ ಅವರು ಶ್ರುತಿ ಅವರ ಪರವಾಗಿ ಒಂದು ಲೋಡ್ ಒಣಹುಲ್ಲನ್ನು ಗೋಶಾಲೆಗೆ ತಂದು ಹಸ್ತಾಂತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !