ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಏಳ್ಗೆಗೆ ದಾರ್ಶನಿಕರ ಸಿದ್ಧಾಂತ ಅಗತ್ಯ: ಸಿಇಒ ಕೆ.ಲೀಲಾವತಿ

Last Updated 14 ಮೇ 2019, 15:32 IST
ಅಕ್ಷರ ಗಾತ್ರ

ಹಾವೇರಿ: ‘ಸಮಾಜದ ಅಭಿವೃದ್ಧಿ, ಸಂಸ್ಕೃತಿ ಬೆಳವಣಿಗೆ ಹಾಗೂ ಪರಂಪರೆ ಉಳಿವಿಗಾಗಿ ವಚನಕಾರರ ಹಾಗೂ ಶಿವಶರಣರ ತತ್ವ ಸಿದ್ಧಾಂತಗಳು ಅಗತ್ಯವಿದೆ’ ಎಂದುಜಿಲ್ಲಾ ಪಂಚಾಯ್ತಿ ಸಿಇಒಕೆ.ಲೀಲಾವತಿ ನುಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಬಸವಣ್ಣ, ಶಂಕರಾಚಾರ್ಯ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನವರು ಮೇಲು-ಕೀಳು ಎಂಬ ಭೇದ ಭಾವ ಹೋಗಲಾಡಿಸಲು ಹಾಗೂ ಸಮಸಮಾಜ ನಿರ್ಮಿಸಿಲುಶ್ರಮಿಸಿದವರು. 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜದ ಸುಧಾರಣೆಗೆ ಮುಂದಾದ ವಚನಕಾರರು ವೈಚಾರಿಕ ಚಿಂತನೆಗಳು, ಮಾನವೀಯ ಮೌಲ್ಯಗಳನ್ನು ಸಾರಿದರು. ಅವರ ತತ್ವ ಸಿದ್ಧಾಂತಗಳು ಜೀವನ ಆದರ್ಶಗಳು ಸಾರ್ವಕಾಲಿಕ. ಬಸವಣ್ಣನವರ ಮಾನವೀಯ ಮೌಲ್ಯಗಳನ್ನು ನಾವೆಲ್ಲರೂ ಪಾಲಿಸೋಣ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಮಂಜಣ್ಣ ಉಪನ್ಯಾಸ ನೀಡಿದರು. ‘ಬಸವಣ್ಣನವರು ಮಹಾಮಾನವತಾವಾದಿ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರು ಸರಿಸಮಾನರು ಎಂದು ಅಪ್ಪಿದವರು.ಅವರ ವಚನಗಳು ಸಮಾಜ ಸುಧಾರಣೆಗೆ ಸಹಕಾರಿ. ಅಂತೆಯೇ ಆದಿ ಗುರು ಶಂಕರಾಚಾರ್ಯರು ತಮ್ಮ ತತ್ವ ಸಿದ್ಧಾಂತಗಳಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ’ ಎಂದರು.

ಉಪನ್ಯಾಸಕ ಕಾಂತೇಶ ರೆಡ್ಡಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ಎಸ್.ಚಿನ್ನಿಕಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಸಮಾಜದ ವಿವಿಧ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT